alex Certify
ಕನ್ನಡ ದುನಿಯಾ       Mobile App
       

Kannada Duniya

ಹೆದ್ದಾರಿಯಲ್ಲೇ ಬಿತ್ತು ಏರೋಪ್ಲೇನ್

us-viman-d

ಕ್ಯಾಲಿಫೋರ್ನಿಯಾ: ಸಂಚಾರ ದಟ್ಟಣೆಯ ಹೆದ್ದಾರಿಯಲ್ಲೇ ಏರೋಪ್ಲೇನ್ ಪತನವಾಗಿ ಹೊತ್ತಿ ಉರಿದ ಘಟನೆ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

ನೋಡ ನೋಡುತ್ತಿದ್ದಂತೆಯೇ ವಿಮಾನ ನೆಲಕ್ಕೆ ಅಪ್ಪಳಿಸಿದ್ದು, ಅದೃಷ್ಟವಶಾತ್ ವಿಮಾನದಲ್ಲಿದ್ದ 6 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಾಸ್ ಏಂಜಲೀಸ್ ಆರೇಂಜ್ ಕೌಂಟಿಯಿಂದ ಅವಳಿ ಎಂಜಿನ್ ಹೊಂದಿರುವ ಲಘು ವಿಮಾನ ಹಾರಾಟ ಆರಂಭಿಸಿದ್ದು, ತಾಂತ್ರಿಕ ತೊಂದರೆಯಿಂದ ಕ್ಯಾಲಿಫೋರ್ನಿಯಾ ಹೆದ್ದಾರಿಯ ಮೇಲೆ ಬಿದ್ದಿದೆ. ನೆಲಕ್ಕೆ ಅಪ್ಪಳಿಸುವ ಸಂದರ್ಭದಲ್ಲಿ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಬೆಂಕಿ ತಗುಲಿದೆ.

ನೋಡ ನೋಡುತ್ತಿದ್ದಂತೆಯೇ ದಟ್ಟ ಹೊಗೆ ಬೆಂಕಿಯ ಜ್ವಾಲೆ ಆವರಿಸಿದ್ದು, ಕೂಡಲೇ ಹೈವೇ ಪ್ಯಾಟ್ರೊಲಿಂಗ್ ಸಿಬ್ಬಂದಿ, ಅಗ್ನಿಶಾಮಕದಳದವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ, ವಿಮಾನದಲ್ಲಿದ್ದ 6 ಮಂದಿಯನ್ನು ಪಾರು ಮಾಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ.

ವಿಮಾನ ಹಾರಾಡುತ್ತಲೇ ನೆಲಕ್ಕೆ ಅಪ್ಪಳಿಸಿ, ಬೆಂಕಿಯ ಜ್ವಾಲೆ, ದಟ್ಟ ಹೊಗೆ ಆವರಿಸಿರುವ ಈ ದೃಶ್ಯವನ್ನು ಕಾರಿನ ಚಾಲಕರೊಬ್ಬರು ಸೆರೆ ಹಿಡಿದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...