alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ನಾಯಿಯ ಮೇಲೆ ಯುವತಿಯ ಕ್ರೌರ್ಯ

dog

ಅಮೆರಿಕದಲ್ಲಿ ಸಾಕು ಪ್ರಾಣಿಗಳನ್ನು ಹಿಂಸಿಸೋದಕ್ಕೆ ಅವಕಾಶವಿಲ್ಲ. ನಾಯಿ ಅಥವಾ ಬೆಕ್ಕುಗಳ ಮೇಲೆ ದೌರ್ಜನ್ಯ ನಡೆಸಿದ್ರೆ ಕಠಿಣ ಶಿಕ್ಷೆ ವಿಧಿಸಲಾಗುತ್ತೆ. ಆದ್ರೀಗ ಮಹಿಳೆಯೊಬ್ಳು ನಾಯಿ ಮೇಲೆ ನಡೆಸಿದ ಕ್ರೌರ್ಯ ವೈರಲ್ ಆಗಿದೆ. ಚಿಕೊ ಎಂಬ ಈ ಶ್ವಾನ ಬೆಕ್ಕಿಗೆ ಹಾಕಿದ್ದ ಆಹಾರವನ್ನು ತಿಂದುಬಿಟ್ಟಿದ್ಯಂತೆ.

ಅಷ್ಟಕ್ಕೇ ಕೋಪಗೊಂಡ ಒಡತಿ, ನಾಯಿಯನ್ನು ಇನ್ನಿಲ್ಲದ ರೀತಿಯಲ್ಲಿ ಹಿಂಸಿಸಿದ್ದಾಳೆ. ನಾಯಿಯನ್ನು ಥಳಿಸಿ, ತುಳಿದಿದ್ದಾಳೆ. ಯುವತಿ ನಾಯಿಯನ್ನು ಹಿಂಸಿಸಿರುವ ದೃಶ್ಯ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. 18 ವರ್ಷದ ಈ ಯುವತಿ ಹಾಗೂ 20 ವರ್ಷದ ಯುವಕನ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ.

ನಾಯಿಯನ್ನು ಕೂಡ ವಶಕ್ಕೆ ಪಡೆದುಕೊಂಡು, ಸುರಕ್ಷಿತ ಆಶ್ರಯ ತಾಣಕ್ಕೆ ಕಳುಹಿಸಲಾಗಿದೆ. ಆಕೆಯ ಮನೆಯಲ್ಲಿದ್ದ ಮೂರು ಬೆಕ್ಕುಗಳನ್ನು ಕೂಡ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಾಯಿಯನ್ನು ಬೇಬಿ ಸಿಟ್ಟಿಂಗ್ ನಲ್ಲಿ ಇಟ್ಕೊಳ್ತಾ ಇದ್ದ ವ್ಯಕ್ತಿಯೊಬ್ಬರು ವೈರಲ್ ಆಗಿರೋ ವಿಡಿಯೋ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...