alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಿದ ಗಗನಯಾತ್ರಿಗಳು

ರೋಬೋಟಿಕ್ ನವೀಕರಣಕ್ಕಾಗಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಐದೂವರೆ ತಿಂಗಳುಗಳ ಕಾಲ ಬೀಡುಬಿಟ್ಟಿದ್ದ ಗಗನಯಾತ್ರಿಗಳು ಯಶಸ್ವಿಯಾಗಿ ಭೂಮಿಗೆ ಮರಳಿದ್ದಾರೆ. ಇಬ್ಬರು ಅಮೆರಿಕನ್ನರು ಹಾಗೂ ಓರ್ವ ರಷ್ಯಾದ ಗಗನಯಾತ್ರಿ ಸುರಕ್ಷಿತವಾಗಿ ಬಂದಿದ್ದಾರೆ.

ವಿಪರೀತ ಚಳಿ ಹಾಗೂ ಗಾಳಿಯ ಅಬ್ಬರದ ನಡುವೆಯೇ ಗಗನಯಾತ್ರಿಗಳು ಕಜಕಿಸ್ತಾನದಲ್ಲಿ ಬಂದಿಳಿದ್ರು. ದಟ್ಟ ಮಂಜು ಹಾಗೂ ಹೆಪ್ಪುಗಟ್ಟಿಸುವಷ್ಟು ಚಳಿ ಇದ್ದಿದ್ದರಿಂದ ಗಗನಯಾತ್ರಿಗಳಿಗೆ ತೊಂದರೆಯಾಗಬಹುದೆಂಬ ಆತಂಕ ವ್ಯಕ್ತವಾಗಿತ್ತು. ಆದ್ರೆ ನಾಸಾ ನೀಡಿದ ಭರವಸೆ ಮೇರೆಗೆ ಅವರನ್ನು ಭೂಮಿಗೆ ಕರೆತರುವ ಕಾರ್ಯ ನಡೆಸಲಾಯ್ತು.

ಜೋ ಅಕಾಬಾ, ಮಾರ್ಕ್ ವಂಡೆ ಹೇ ಹಾಗೂ ರಷ್ಯಾದ ಅಲೆಕ್ಸಾಂಡರ್ ಮಿಸುರ್ಕಿ ಮೂವರು ಕೂಡ ಹಸನ್ಮುಖರಾಗಿ, ಎಲ್ಲರಿಗೂ ಕೈಬೀಸುತ್ತ ಒಬ್ಬೊಬ್ಬರಾಗಿಯೇ ಕ್ಯಾಪ್ಸುಲ್ ನಿಂದ ಕೆಳಕ್ಕಿಳಿದ್ರು. ಇಲ್ಲಿನ ವಾತಾವರಣದಿಂದ ಅವರಿಗೆ ತೊಂದರೆಯಾಗಬಾರದೆಂದು ಮೊದಲೇ ಬ್ಲಾಂಕೆಟ್ ಗಳನ್ನು ಸಿದ್ಧಪಡಿಸಿ ಇಡಲಾಗಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...