alex Certify
ಕನ್ನಡ ದುನಿಯಾ       Mobile App
       

Kannada Duniya

ಬೀಚ್ ನಲ್ಲಿ ಬಂದಿಳಿಯಿತು ಲಘು ವಿಮಾನ…!

ಎಂಜಿನ್ ತೊಂದರೆಯಿಂದ ಬೀಚ್ ನಲ್ಲಿಯೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ. ಮಹಾ ಯುದ್ದದ 100 ನೇ ವಾರ್ಷಿಕೋತ್ಸವ ಸಂಬಂಧ ಏರ್ ಶೋ ಏರ್ಪಡಿಸಲಾಗಿತ್ತು. ಇದಕ್ಕಾಗಿ 1930 ನೇ ಇಸವಿಯ ವಿಮಾನವನ್ನು ಏರ್ ಶೋನಲ್ಲಿ ಹಾರಿಸಲಾಗ್ತಿತ್ತು.

ಆದ್ರೆ ವಿಮಾನದಲ್ಲಿ ಎಂಜಿನ್ ತೊಂದರೆ ಉಂಟಾಗಿದ್ರಿಂದ ವಿಮಾನ ಮೇಲಕ್ಕೆ ಹಾರಲಿಲ್ಲ. ಹೀಗಾಗಿ ಬೀಚ್ ನಲ್ಲಿಯೇ ತುರ್ತು ಭೂಸ್ಪರ್ಶ ಮಾಡಬೇಕಾಯ್ತು ಅಂತಾರೆ ಪೈಲೆಟ್ ಝಾಕ್ ರಾಕ್ ಮತ್ತು ಸಹ ಪ್ರಯಾಣಿಕ ಟುಡಿ ಸ್ಪಿಲ್ಲರ್.

ಏರ್ ಶೋನಲ್ಲಿ ವಿಮಾನ ಹಾರಿಸುತ್ತಿದ್ದಂತೆ ಏನೋ ತಪ್ಪಾಗ್ತಿದೆ ಅಂದುಕೊಂಡ್ವಿ….ಹಾಗೆಯೇ ಅವಘಡ ಸಂಭವಿಸಲಿದೆ ಎಂದು ಅರಿತೆವು. ಆದ್ರೆ ವಿಮಾನ ಭೂಸ್ಪರ್ಶ ಮಾಡಲು ಸ್ಥಳದಲ್ಲಿ ಯಾವುದೇ ಲ್ಯಾಂಡಿಂಗ್ ಸ್ಟ್ರಿಪ್ ಇರಲಿಲ್ಲ. ಹೀಗಾಗಿ ಡಿವೊನ್ನ ಸಿಡ್ಮೌತ್ನಲ್ಲಿರುವ ಜಾಕೋಬ್ ಲ್ಯಾಡರ್ ಬೀಚ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆವು ಅಂತಾ ಪೈಲೆಟ್ ತಿಳಿಸಿದ್ದಾರೆ.

ಲ್ಯಾಂಡಿಂಗ್ ಸ್ಟ್ರಿಪ್ ಇಲ್ಲದೆ ವಿಮಾನವು ಸಮುದ್ರ ತೀರದಲ್ಲಿ ಸುರಕ್ಷಿತವಾಗಿ ಇಳಿಯಬಲ್ಲದು ಎಂದು ಯುಕೆ ರಾಷ್ಟ್ರೀಯ ಪೊಲೀಸ್ ವಾಯು ಸೇನೆಯು ತಿಳಿಸಿದೆ. ಈ ಘಟನೆಯಲ್ಲಿ ಬೀಚ್ ನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ.

ಸಮುದ್ರತೀರದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಭಯಾನಕ ಕ್ಷಣವನ್ನು ಪ್ರತ್ಯಕ್ಷದರ್ಶಿಗಳು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಪೈಲೆಟ್ ಝಾಕ್ ರಾಕ್ ತೋರಿದ ಸಮಯಪ್ರಜ್ಞೆಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...