alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಯೋಡರೆಂಟ್ ಬಳಸ್ತೀರಾ? ಹಾಗಿದ್ರೆ ತಪ್ಪದೆ ಓದಿ ಈ ಸುದ್ದಿ

ಡಿಯೋಡರೆಂಟ್ ಸ್ಪ್ರೇ ಯಾರಿಗೆ ತಾನೇ ಗೊತ್ತಿಲ್ಲ. ದೇಹದ ದುರ್ಗಂಧ ಮರೆಮಾಚಲು ಇದರ ಬಳಕೆ ಸರ್ವೇಸಾಮಾನ್ಯ. ಆದರೆ ಇದರಲ್ಲಿ ಪ್ರಾಣಕ್ಕೇ ಕುತ್ತು ತರುವಂತಹ ಅಪಾಯಕಾರಿ ರಾಸಾಯನಿಕವಿದೆ ಎಂಬ ಸಂಗತಿ ಗೊತ್ತಾ ನಿಮಗೆ?

ನೆದರ್ಲ್ಯಾಂಡ್‌ನ 19ರ ಯುವಕನೊಬ್ಬ ಉನ್ಮಾದಕತೆ ಹೆಚ್ಚಿಸಲು ಡಿಯೋಡರೆಂಟ್ ಸ್ಪ್ರೇ ವಾಸನೆ ಅತಿಯಾಗಿ ಸೇವಿಸಿದ ಪರಿಣಾಮ ಪ್ರಾಣವನ್ನೇ ತೆತ್ತಿದ್ದಾನೆ. ಇದು ತುಂಬಾ ವಿರಳ ಪ್ರಕರಣ. ಆದರೆ ಜನರಿಗೆ ಡಿಯೋಡರೆಂಟ್ ಇಷ್ಟೊಂದು ಅಪಾಯಕಾರಿ ಎಂಬುದು ತಿಳಿದಿಲ್ಲ ಎನ್ನುತ್ತಾರೆ ಅವನಿಗೆ ಚಿಕಿತ್ಸೆ ನೀಡಿದ ಡಾ.ಕೆಲ್ವಿನ್ ಹಾರ್ವೇ ಕ್ರಾಂಪ್.

ಆತ ಮಾನಸಿಕವಾಗಿ ದುರ್ಬಲನಾಗಿದ್ದ. ಮುಖಕ್ಕೆ ಟವೆಲ್ ಮುಚ್ಚಿಕೊಂಡು ನೇರವಾಗಿ ಮೂಗಿನತ್ತ ಸ್ಪ್ರೇ ಮಾಡಿಕೊಂಡಿದ್ದಾನೆ. ಅದರಿಂದ ತೀರಾ ಕ್ರಿಯಾಶೀಲನಾಗಿದ್ದ. ಮೇಲಕ್ಕೆ, ಕೆಳಕ್ಕೆ ಜಿಗಿಯುತ್ತಿದ್ದ. ಬಳಿಕ ಏಕಾಏಕಿಯಾಗಿ ರಕ್ತದ ಹರಿವು ನಿಂತಿತು. ಹೃದಯಾಘಾತವಾಗಿ ಕುಸಿದ. ಕೋಮಾಕ್ಕೆ ಜಾರಿದ ಅವನಿಗೆ ಮರುಪ್ರಜ್ಞೆ ಬರಿಸಲು ಸಾಧ್ಯವಾಗಲಿಲ್ಲ ಎಂದು ಅವರು ವಿವರಿಸಿದ್ದಾರೆ.

ದ್ರಾವಣಗಳನ್ನು ಮಾದಕ ದ್ರವ್ಯವಾಗಿ ಉಸಿರಾಡುವ ಪ್ರವೃತ್ತಿ 15ರಿಂದ 19 ವರ್ಷದ ವಯೋಮಾನದ ಯುವಕರಲ್ಲಿ ಹೆಚ್ಚಿರುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ಇಂತಹ ಇನ್ಹೇಲರ್‌ಗಳು ಲಿವರ್, ಕಿಡ್ನಿಗೆ ಹಾನಿ ಮಾಡಬಹುದಾಗಿದೆ. ಮೆದುಳೂ ಹಾನಿಗೊಳಗಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...