alex Certify
ಕನ್ನಡ ದುನಿಯಾ       Mobile App
       

Kannada Duniya

17 ವರ್ಷಗಳ ಬಳಿಕ ಕಾರ್ಯಾರಂಭ ಮಾಡಿದ ನ್ಯೂಯಾರ್ಕ್ ಸಬ್ ವೇ

17 ವರ್ಷಗಳ ಹಿಂದೆ ಅಂದ್ರೆ 2001ರ ಸೆಪ್ಟೆಂಬರ್ 11ರಂದು ಅಮೆರಿಕ ವರ್ಲ್ಡ್ ಟ್ರೇಡ್ ಸೆಂಟರ್ ಗಳ ಮೇಲೆ ನಡೆದ ವೈಮಾನಿಕ ದಾಳಿ ನಿಮಗೆ ನೆನಪಿರಬೇಕಲ್ವಾ.? ಒಸಾಮಾ ಬಿನ್ ಲ್ಯಾಡೆನ್ ನ ಅಲ್ ಖೈದಾ ಉಗ್ರರು ಅಮೆರಿಕದ ಹೃದಯ ಭಾಗಕ್ಕೆ ವಿಮಾನ ನುಗ್ಗಿಸಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದರು.

ಸೆಪ್ಟೆಂಬರ್ 11ಕ್ಕೆ ಆ ಘಟನೆಗೆ 17 ವರ್ಷಗಳು ಭರ್ತಿಯಾಗಲಿದೆ. ಅದಕ್ಕೆ ಮುನ್ನಾ ದಿನ ಅಮೆರಿಕದಲ್ಲಿ ವಿಮಾನ ದಾಳಿಯಿಂದಾಗಿ ಮುಚ್ಚಿಹೋಗಿದ್ದ ಸಬ್ ವೇ ಈಗ ಪುನಾರಂಭಗೊಂಡಿದೆ. ನ್ಯೂಯಾರ್ಕ್ ನ ಸಬ್ ವೇ ರೈಲು ನಿಲ್ದಾಣ 17ವರ್ಷಗಳ ಬಳಿಕ ಮತ್ತೆ ಕಾರ್ಯಾರಂಭ ಮಾಡಿದೆ.

ನಗರದ ಬಹುಮುಖ್ಯ ರೈಲು ನಿಲ್ದಾಣವಾದ ಕೋರ್ಟ್ ಲ್ಯಾಂಡ್ ನಿಲ್ದಾಣದ ಮೂಲಕ ಸಬ್ ವೇ ನಿಲ್ದಾಣಗಳು ಪುನಃ ಕಾರ್ಯಾರಂಭ ಮಾಡಿದೆ. 2015ರಿಂದ ಈ ನಿಲ್ದಾಣದ ನಿರ್ಮಾಣ ಕಾರ್ಯ ನಡೆಸಲಾಗ್ತಿತ್ತು. ನಿಲ್ದಾಣ ಪುನರಾರಂಭ ಕಾರ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಜನರು ಚಪ್ಪಾಳೆ ತಟ್ಟುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...