alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಲ್ಜಿಯಂ ಬಾಲಕನಿಗೆ ಸಿಗ್ತು ದಯಾ ಮರಣಕ್ಕೆ ಅನುಮತಿ

die-by-euthanasia_18_09_2016

ಬೆಲ್ಜಿಯಂನಲ್ಲಿ 17 ವರ್ಷದ ಬಾಲಕನಿಗೆ ದಯಾಮರಣಕ್ಕೆ ಅನುಮತಿ ಸಿಕ್ಕಿದೆ.  ಬೆಲ್ಜಿಯಂನಲ್ಲಿ ಮೊದಲ ಬಾರಿ ದಯಾಮರಣಕ್ಕೆ ಅನುಮತಿ ಪಡೆದ ಮೊದಲ ಬಾಲಕ ಈತನಾಗಿದ್ದಾನೆ. ಅಸಹನೀಯ ದೈಹಿಕ ನೋವಿನಿಂದ ಬಳಲ್ತಾ ಇದ್ದ ಬಾಲಕನಿಗೆ ಕರುಣೆ ತೋರಲಾಗಿದೆ.

ಅಧಿಕಾರಿಗಳು ಮಗುವಿನ ಸಾವಿನ ಸುದ್ದಿಯನ್ನು ಘೋಷಣೆ ಮಾಡಿದ್ದಾರೆ. 2014ರಲ್ಲಿ ಅಂದ್ರೆ ಎರಡು ವರ್ಷಗಳ ಹಿಂದೆ ದಯಾಮರಣಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆಗೆದುಹಾಕಲಾಗಿತ್ತು. ಆ ನಂತ್ರ ಯಾವುದೇ ವಯಸ್ಸಿನ ಮಕ್ಕಳು ದಯಾಮರಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇಂಜೆಕ್ಷನ್ ಮೂಲಕ ಮಕ್ಕಳಿಗೆ ಮುಕ್ತಿ ನೀಡಲಾಗುತ್ತದೆ. ಬೆಲ್ಜಿಯಂ, ದಯಾಮರಣಕ್ಕೆ ಒಪ್ಪಿಗೆ ನೀಡಿದ ವಿಶ್ವದ ಮೊದಲ ದೇಶವಾಗಿದೆ.

ನೆರೆಯ ನೆದರ್ಲ್ಯಾಂಡ್ ನಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ದಯಾಮರಣಕ್ಕೆ ಅನುಮತಿ ನೀಡಲಾಗುತ್ತದೆ. 18 ವರ್ಷದೊಳಗಿನ ಮಕ್ಕಳ ಪಾಲಕರ ಅನುಮತಿ ಬೇಕಾಗುತ್ತದೆ. ಜೊತೆಗೆ ಮಕ್ಕಳ ಖಾಯಿಲೆ ಕೊನೆ ಹಂತದಲ್ಲಿದ್ದಲ್ಲಿ ಮಾತ್ರ ಅನುಮತಿ ನೀಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...