alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಸತ್ ನಲ್ಲಿ ದಿನಕ್ಕೆ 160 ಬಾರಿ ಪೋರ್ನ್ ಸೈಟ್ ತೆರೆಯುವ ಪ್ರಯತ್ನ…!

2017ರಲ್ಲಿ ಯುಕೆ ಸಂಸತ್ ನಲ್ಲಿ ಪ್ರತಿದಿನ 160 ಬಾರಿ ಪೋರ್ನ್ ಸೈಟ್ ತೆರೆಯಲು ಪ್ರಯತ್ನ ಮಾಡಲಾಗಿದೆ. ಯುಕೆ ಪ್ರೆಸ್ ಅಸೋಸಿಯೇಷನ್ ಈ ವಿಷ್ಯವನ್ನು ಬಹಿರಂಗಪಡಿಸಿದೆ. ಕಳೆದ ಜೂನ್ ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ನಂತ್ರ ಸಂಸದೀಯ ನೆಟ್ವರ್ಕ್ ನಲ್ಲಿ 24,473 ಬಾರಿ ಅಶ್ಲೀಲ ಸೈಟ್ ತೆರೆಯಲು ಪ್ರಯತ್ನ ಮಾಡಲಾಗಿದೆ.

ಸಂಸದೀಯ ನೆಟ್ವರ್ಕ್ ಅನ್ನು ಪಾರ್ಲಿಮೆಂಟ್ ಸದಸ್ಯರು ಹಾಗೂ ಸಿಬ್ಬಂದಿ ಬಳಸುತ್ತಾರೆ. ಉದ್ದೇಶಪೂರ್ವಕವಾಗಿ ಪೋರ್ನ್ ಸೈಟ್ ತೆರೆಯಲು ಪ್ರಯತ್ನ ಮಾಡಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದ್ರೆ 2017ರಲ್ಲಿ ಕಡಿಮೆ ಅಂಕಿ-ಅಂಶ ದಾಖಲಾಗಿದೆ ಎಂದಿದ್ದಾರೆ.

ಸಂಸದೀಯ ನೆಟ್ವರ್ಕ್ ನಲ್ಲಿ ಪೋರ್ನ್ ಸೈಟ್ ಗಳನ್ನು ಬ್ಲಾಕ್ ಮಾಡಲಾಗಿದೆ. ಹಾಗಾಗಿ ಯಾರೂ ಉದ್ದೇಶಪೂರ್ವಕವಾಗಿ ಈ ಸೈಟ್ ಓಪನ್ ಮಾಡುವುದಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರೆ. ಪಾರ್ಲಿಮೆಂಟ್ ಸದಸ್ಯರು, ಸಿಬ್ಬಂದಿ ಜೊತೆ ಗೆಸ್ಟ್ ಹೌಸ್ ಗೆ ಬರುವ ಅತಿಥಿಗಳು ಈ ನೆಟ್ವರ್ಕ್ ಬಳಸುತ್ತಾರೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...