alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರೀ ಚಿಕನ್ ಕೇಳಿದ್ದ ಹುಡುಗ ಈಗ ವಿಶ್ವದಾಖಲೆಯ ವೀರ

tweet

ಅಮೆರಿಕದಲ್ಲಿ 16 ವರ್ಷದ ಹುಡುಗ ಮಾಡಿದ ಟ್ವೀಟ್ ವಿಶ್ವದಾಖಲೆ ನಿರ್ಮಿಸಿದೆ. ಅತಿ ಹೆಚ್ಚು ಬಾರಿ ರಿಟ್ವೀಟ್ ಮಾಡಿದ ಮೆಸೇಜ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಹಿಂದೆ ಈ ದಾಖಲೆ ಆಸ್ಕರ್ ಸೆಲ್ಫಿ ಹೆಸರಲ್ಲಿತ್ತು. ಕಾರ್ಟರ್ ವಿಲ್ಕರ್ಸನ್ ಎಂಬ ಹುಡುಗ ಆ ದಾಖಲೆಯನ್ನು ಮುರಿದಿದ್ದಾನೆ.

ಇವನು ಮಾಡಿದ್ದ ಟ್ವೀಟ್ ಗೆ 3,430,500 ರಿಟ್ವೀಟ್ಸ್ ಬಂದಿವೆ. ಚಿಕನ್ ನಗೆಟ್ಸ್ ಅಂದ್ರೆ ಕಾರ್ಟರ್ ಗೆ ತುಂಬಾನೇ ಇಷ್ಟವಂತೆ. ತನಗೆ ಒಂದು ವರ್ಷ ಯಾರಾದ್ರೂ ಫ್ರೀಯಾಗಿ ಚಿಕನ್ ನಗ್ಗೆಟ್ಸ್ ಕೊಡಿ ಅಂತಾ ಈತ ಟ್ವೀಟ್ ಮಾಡಿದ್ದ. 365 ದಿನಗಳ ಕಾಲ ಉಚಿತವಾಗಿ ಚಿಕನ್ ನಗೆಟ್ಸ್ ಪಡೆಯಲು ಎಷ್ಟು ರಿಟ್ವೀಟ್ ಬೇಕು ಅಂತಾ ಕೇಳಿದ್ದ.

ಫಾಸ್ಟ್ ಫುಡ್ ರೆಸ್ಟೋರೆಂಟ್ ಒಂದು 18 ಮಿಲಿಯನ್ ರಿಟ್ವೀಟ್ಸ್ ಬೇಕು ಅಂತಾ ಪ್ರತಿಕ್ರಿಯಿಸಿತ್ತು. ಕಾರ್ಟರ್ ಕೇಳಿದ್ದ ಮುಗ್ಧ ಪ್ರಶ್ನೆ ಆನ್ ಲೈನ್ ಕ್ಯಾಂಪೇನ್ ಆಗಿ ಬದಲಾಗಿತ್ತು. ಕಾರ್ಟರ್ ಮಾಡಿದ್ದ ಟ್ವೀಟ್ ಇಂಟರ್ನೆಟ್ ನಲ್ಲಿ ಹೊಸ ದಾಖಲೆ ಮಾಡಿದೆ. ಆದ್ರೆ 18 ಮಿಲಿಯನ್ ರಿಟ್ವೀಟ್ ಗಳು ಬಂದಿಲ್ಲ.

2014ರಲ್ಲಿ ಹಾಲಿವುಡ್ ಸೆಲೆಬ್ರಿಟಿಗಳಾದ ಕೆವಿನ್ ಸ್ಪೇಸಿ, ಬ್ರಾಡ್ ಪಿಟ್, ಬ್ರಾಡ್ಲಿ ಕೂಪರ್, ಜೂಲಿಯಾ ರಾಬರ್ಟ್ಸ್ ಜೊತೆಯಾಗಿ ತೆಗೆದುಕೊಂಡಿದ್ದ ಸೆಲ್ಫಿಗೆ ಅತಿ ಹೆಚ್ಚು ರಿಟ್ವೀಟ್ ಬಂದಿದ್ವು. ಆ ಫೋಟೋ ಗಿನ್ನಿಸ್ ದಾಖಲೆ ಮಾಡಿತ್ತು. ಆ ದಾಖಲೆಯನ್ನೀಗ ಕಾರ್ಟರ್ ಮಾಡಿದ್ದ ಟ್ವೀಟ್ ಮುರಿದಿದೆ. ಫಾಸ್ಟ್ ಫುಡ್ ಮಳಿಗೆ ಕಾರ್ಟರ್ ಗೆ ಒಂದು ವರ್ಷ ಫ್ರೀಯಾಗಿ ಚಿಕನ್ ನಗೆಟ್ಸ್ ಕೊಡಲು ಒಪ್ಪಿಕೊಂಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...