alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಳ ಪರಾರಿಗೆ ಸಹಕರಿಸಿದಾಕೆಯನ್ನು ಜೀವಂತ ಸುಟ್ಟರು

burnt vanಪಾಕಿಸ್ತಾನದಲ್ಲೊಂದು ಅಮಾನವೀಯ ಕೃತ್ಯ ನಡೆದಿದೆ. ಪ್ರೇಮಿಗಳಿಬ್ಬರು ಪರಾರಿಯಾಗಲು ಸಹಕರಿಸಿದ್ದಳೆಂಬ ಕಾರಣಕ್ಕೆ 16 ವರ್ಷದ ಬಾಲಕಿಯನ್ನು ಜೀವಂತವಾಗಿ ದಹಿಸಲಾಗಿದೆ. ಶಾಕಿಂಗ್ ಸಂಗತಿಯೆಂದರೆ ಗ್ರಾಮದ ಮುಖಂಡರು ನೀಡಿದ್ದ ಈ ತೀರ್ಪಿಗೆ ಬಾಲಕಿಯ ತಾಯಿ ಹಾಗೂ ಸಹೋದರನೂ ಒಪ್ಪಿಗೆ ಸೂಚಿಸಿರುವುದು.

ಪಾಕಿಸ್ತಾನದ ಕೆಲ ಪ್ರಾಂತ್ಯಗಳಲ್ಲಿ ಇನ್ನೂ ಜೀವಂತವಾಗಿರುವ ‘ಜಿರ್ಗಾ’ ಪಂಚಾಯಿತಿಗಳು ಇಂತಹ ಅಮಾನುಷ ತೀರ್ಪುಗಳನ್ನು ನೀಡುತ್ತಿದ್ದು, ಇದೀಗ ಬಾಲಕಿಯನ್ನು ಜೀವಂತವಾಗಿ ದಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿ ‘ಜಿರ್ಗಾ’ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರೇಮಿಗಳು ಪರಾರಿಯಾಗಲು ಸಹಕರಿಸುವ ಮೂಲಕ ಬಾಲಕಿ ಗ್ರಾಮದ ಸಂಪ್ರದಾಯವನ್ನು ಮುರಿದಿದ್ದಾಳೆಂದು ಆರೋಪಿಸಿ, ಪ್ರೇಮಿಗಳು ಪರಾರಿಗೆ ಬಳಸಿದ್ದರೆನ್ನಲಾದ ವಾಹನದಲ್ಲೇ ಬಾಲಕಿಯನ್ನು ಕೂರಿಸಿ ಆಕೆ ಹಾಗೂ ವಾಹನದ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲಾಗಿತ್ತು. ಬಳಿಕ ಇದು ಪೊಲೀಸರ ಗಮನಕ್ಕೆ ಬಂದಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...