alex Certify
ಕನ್ನಡ ದುನಿಯಾ       Mobile App
       

Kannada Duniya

ಬರೀ 35 ಸೆಕೆಂಡ್ ನಲ್ಲಿ ಅಪಾಯಕಾರಿ ಸಾಹಸ ಮಾಡಿದ ಬಾಲಕ

slab

ಚಿತ್ರವಿಚಿತ್ರ ಸಾಹಸಗಳ ಮೂಲಕ ದಾಖಲೆ ಮಾಡುವವರು ಕಮ್ಮಿಯೇನಿಲ್ಲ. ಬೋಸ್ನಿಯಾದಲ್ಲಿ 16 ವರ್ಷದ ಬಾಲಕನೊಬ್ಬ ಅತ್ಯಂತ ರೋಮಾಂಚನಕಾರಿ ಸಾಹಸ ಮಾಡಿದ್ದಾನೆ. ಈತ ಟೇಕ್ವಾಂಡೋ ಚಾಂಪಿಯನ್. ತಲೆಯಿಂದ್ಲೇ ಕಲ್ಲಿನ ಚಪ್ಪಡಿಗಳನ್ನು ಒಡೆಯೋದು ಇವನ ಸ್ಪೆಷಾಲಿಟಿ.

ಕೆರಿಮ್ ಎಂಬ ಬಾಲಕ ಈಗ ಹೊಸದೊಂದು ದಾಖಲೆ ಮಾಡಿದ್ದಾನೆ. ಒಟ್ಟು 111 ಸ್ಲಾಬ್ ಗಳನ್ನು ತಲೆಯಿಂದ್ಲೇ ಪಟಪಟನೆ ಒಡೆದು ಹಾಕಿದ್ದಾನೆ. ಈ ಕಾರ್ಯಕ್ಕೆ ಅವನು ತೆಗೆದುಕೊಂಡ ಸಮಯ ಎಷ್ಟು ಗೊತ್ತಾ? ಕೇವಲ 35 ಸೆಕೆಂಡ್ ಗಳು. ಬೊಸ್ನಿಯನ್ ಕೆರಿಮ್ ಇದರೊಂದಿಗೆ ಹೊಸ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾನೆ.

ಬಾಲಕನ ಅದ್ಭುತ ಸಾಹಸದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡ್ತಾ ಇದೆ. ಬೊಸ್ನಿಯನ್ ಕೆರಿಮ್ ಮಾಡಿರೋ ಅಪಾಯಕಾರಿ ಸಾಹಸ ಎಲ್ಲರನ್ನೂ ದಂಗಾಗಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...