alex Certify
ಕನ್ನಡ ದುನಿಯಾ       Mobile App
       

Kannada Duniya

ಅದ್ಬುತ! ಒಂದೇ ಬಾರಿ ಗರ್ಭ ಧರಿಸಿದ ಒಂದೇ ಆಸ್ಪತ್ರೆಯ 16 ದಾದಿಯರು

ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ದಾದಿಯರು ಬಹು ಮುಖ್ಯ ಪಾತ್ರ ವಹಿಸುತ್ತಾರೆ. ಅವ್ರ ಆರೈಕೆಯಿಲ್ಲದೆ ರೋಗಿಗಳು ಗುಣಮುಖರಾಗಲು ಸಾಧ್ಯವಿಲ್ಲ. ಆದ್ರೆ ಅಮೆರಿಕಾದ ಅರಿಜೋನ್ ವೈದ್ಯಕೀಯ ಕೇಂದ್ರದಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ. ಇದು ಆಸ್ಪತ್ರೆ ಆಡಳಿತ ಮಂಡಳಿಗೆ ತಲೆ ನೋವಾಗುವ ಸಾಧ್ಯತೆಯಿದೆ.

ಅರಿಜೋನಾ ಮಿಸಾದ ಡಿಜರ್ಟ್ ಮೆಡಿಕಲ್ ಸೆಂಟರ್ ನಲ್ಲಿ 16 ಮಂದಿ ಕೆಲಸ ಮಾಡ್ತಿದ್ದಾರೆ. ಈ ಎಲ್ಲರೂ ಐಸಿಯು ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ದಾದಿಯರು ಒಂದೇ ಬಾರಿ ಗರ್ಭವತಿಯರಾಗಿದ್ದಾರೆ. ಅಕ್ಟೋಬರ್ ನಿಂದ ಜನವರಿಯೊಳಗೆ ಎಲ್ಲ ದಾದಿಯರೂ ಮಕ್ಕಳಿಗೆ ಜನ್ಮ ನೀಡಲಿದ್ದಾರೆ.

ಒಂದೇ ಬಾರಿ ದಾದಿಯರು ರಜೆ ಮೇಲೆ ಹೋಗುತ್ತಿರುವುದು ಮೆಡಿಕಲ್ ಸೆಂಟರ್ ಗೆ ತಲೆನೋವಾಗಿ ಪರಿಣಮಿಸಿದೆ. ರಜೆ ವೇಳೆ ಬೇರೆ ನರ್ಸ್ ಗಳನ್ನು ನೇಮಕ ಮಾಡಿಕೊಳ್ಳಬೇಕಾಗಿದೆ. ಈಗಾಗಲೇ ಕೆಲ ನರ್ಸ್ ಗಳನ್ನು ನೇಮಕ ಮಾಡಿಕೊಂಡು ತರಬೇತಿ ನೀಡಲಾಗ್ತಿದೆ. ಗರ್ಭಿಣಿ ದಾದಿಯರು ಐಸಿಯು ನಲ್ಲಿ ಕೆಲಸ ಮಾಡ್ತಿರುವ ಕಾರಣ ಅವ್ರಿಗೆ ಸೋಂಕು ತಗಲುವ ಸಾಧ್ಯತೆಯಿದೆ. ಹಾಗಾಗಿ ಅವ್ರ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...