alex Certify
ಕನ್ನಡ ದುನಿಯಾ       Mobile App
       

Kannada Duniya

60 ವರ್ಷದವನನ್ನು ಮದುವೆಯಾದ 6 ದಿನದಲ್ಲೇ ನಡೀತು ಅಪ್ರಾಪ್ತೆ ಸಾವು

ಸುಮಾರು 2 ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅಪ್ರಾಪ್ತೆ ಜೊತೆ 60 ವರ್ಷದ ವ್ಯಕ್ತಿಯ ಮದುವೆ ನಡೆದ ಫೋಟೋ ವೈರಲ್ ಆಗಿತ್ತು. ಕರ್ನಾಟಕದ ಹುಡುಗಿ ಸಬಿಹಾ ಬಾನು ಮದುವೆ ಫೋಟೋ ಇದಾಗಿತ್ತು. 15 ವರ್ಷದ ಸಬಿಹಾ ನೈಜೀರಿಯಾ ಮೂಲದ 60 ವರ್ಷದ ವ್ಯಕ್ತಿಯನ್ನು ಮದುವೆಯಾಗಿದ್ದಳು. ಈಗ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಸಬಿಹಾ ಮದುವೆಯಾದ 6 ದಿನಗಳಲ್ಲಿಯೇ ಸಾವನ್ನಪ್ಪಿದ್ದಾಳೆ ಎನ್ನಲಾಗ್ತಿದೆ.

ಸಬಿಹಾ ಹಾಗೂ ನೈಜೀರಿಯಾ ನಿವಾಸಿ ಬಕ್ರ ಅಲ್ ಮೀಮ್ ಫೇಸ್ಬುಕ್ ನಲ್ಲಿ ಪರಿಚಿತರಾಗಿದ್ದರು. ಪರಿಚಯ ಪ್ರೀತಿಗೆ ತಿರುಗಿದೆ. ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಸಬಿಹಾ ಅಪ್ರಾಪ್ತೆಯಾಗಿದ್ದು, ಬಕ್ರಿಗೆ ಮದುವೆಯಾಗಿದ್ದರೂ ಮನೆಯವರು ಒಪ್ಪಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸಬಿಹಾ. ಸಬಿಹಾ ದೊಡ್ಡ ಖಾಯಿಲೆಯಿಂದ ಬಳಲುತ್ತಿದ್ದಳಂತೆ.

ತನ್ನ ಜೀವನ ಇನ್ನೊಂದು ತಿಂಗಳು ಎಂಬುದು ಗೊತ್ತಾದ ಸಬಿಹಾ, ಬಕ್ರ ಮದುವೆ ಆಸೆಯನ್ನು ಮನೆಯವರಿಗೆ ತಿಳಿಸಿದ್ದಳಂತೆ. ಇದಕ್ಕೆ ಮನೆಯವರು ಒಪ್ಪಿದ್ದರಂತೆ. ನೈಜೀರಿಯಾದಿಂದ ಬಂದ ಬಕ್ರ ಕೆಲವರ ಸಮ್ಮುಖದಲ್ಲಿ ಮದುವೆಯಾಗಿದ್ದಾನೆ. ಮದುವೆಯಾಗಿ 6 ದಿನಕ್ಕೆ ಸಬಿಹಾ ಸಾವನ್ನಪ್ಪಿದ್ದಾಳೆ.

ಇದು ಲವ್ ಮ್ಯಾರೇಜ್ ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಲವ್ ಅಲ್ಲ ಬಾಲ್ಯ ವಿವಾಹ ಎಂದಿದ್ದಾರೆ. ಮತ್ತೆ ಕೆಲವರು ಬಲವಂತದ ಮದುವೆ. ಸಬಿಹಾ ಪಾಲಕರು ಮಗಳನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದ್ದರು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...