alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲಿ ರೈಡ್ ಗಾಗಿ ಕಾರು ಕದ್ದ 13 ವರ್ಷದ ಬಾಲಕ…!

ನ್ಯೂಜಿಲ್ಯಾಂಡ್ ನಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಕಾರು ಚಾಲನೆ ಮಾಡುವ ಕ್ರೇಜ್ ಹೊಂದಿದ್ದ 13 ವರ್ಷದ ಬಾಲಕನೊಬ್ಬ ಮಹಿಳೆಯೊಬ್ಬರ ಕಾರು ಕದ್ದಿದ್ದು, 7 ಮಂದಿ ಅಪ್ರಾಪ್ತ ಸ್ನೇಹಿತರನ್ನು ಕೂರಿಸಿಕೊಂಡು ಜಾಲಿ ರೈಡ್ ಗೆ ಹೋದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಬುಧವಾರದಂದು ಮಹಿಳೆಯೊಬ್ಬಳು ತನ್ನ ಕಾರು ಕಳುವಾಗಿದೆ ಎಂದು ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿ ತಿಳಿಸಿದ್ದರು. ಅದರನ್ವಯ ಪೊಲೀಸರು ಕಾರಿನ ತಪಾಸಣೆ ಆರಂಭಿಸಿದ್ದು, ವೇಗವಾಗಿ ಹೋಗುತ್ತಿದ್ದ ಆಕೆಯ ಕಾರನ್ನು ಮಾರ್ಗ ಮಧ್ಯೆ ತಡೆಯಲು ಯತ್ನಿಸಿದ್ದಾರೆ.

ಆದರೆ ಚಾಲನೆ ಮಾಡುತ್ತಿದ್ದಾತ ಮತ್ತಷ್ಟು ವೇಗವನ್ನು ಹೆಚ್ಚಿಸಿದ್ದು, ಕಾರಿನ ಬೆನ್ನಟ್ಟಿದ ಪೊಲೀಸರು ಕೊನೆಗೂ ಅದನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಿನಿಂದ ಇಳಿದವರನ್ನು ಕಂಡು ಪೊಲೀಸರು ಶಾಕ್ ಗೆ ಒಳಗಾಗಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ 13 ವರ್ಷದ ಬಾಲಕ ಹಾಗೂ ಆತನ ಜೊತೆಗಿದ್ದ 10 ರಿಂದ 16 ವರ್ಷದ ಏಳು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇವರೆಲ್ಲರೂ ಬೇರೆ ಬೇರೆ ಕುಟುಂಬಕ್ಕೆ ಸೇರಿದವರೆಂದು ಹೇಳಲಾಗಿದ್ದು, ಅಚ್ಚರಿಯ ಸಂಗತಿಯೆಂದರೆ ತಮ್ಮ ಮಕ್ಕಳು ಮನೆಯಲ್ಲಿಲ್ಲವೆಂಬ ಸಂಗತಿ ಅವರುಗಳ ಪೋಷಕರಿಗೆ ತಿಳಿದೇ ಇರಲಿಲ್ಲ. ಬಾಲಕರ ವಿರುದ್ದ ಪ್ರಕರಣ ದಾಖಲಿಸಲಾಗಿದೆಯೇ ಇಲ್ಲವೇ ಎಂಬುದು ತಿಳಿದುಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...