alex Certify
ಕನ್ನಡ ದುನಿಯಾ       Mobile App
       

Kannada Duniya

OMG ! ಮೊಬೈಲ್ ಚಾರ್ಜ್ ಗೆ ಹಾಕಿದಾಗ ಹೀಗೂ ಆಗುತ್ತೆ

balaki neck

ಮೊಬೈಲ್ ಬಳಸುವಾಗ ಸಾಮಾನ್ಯ ತಿಳುವಳಿಕೆ ಇರಬೇಕು. ಇಲ್ಲದಿದ್ದರೆ ಯಡವಟ್ಟುಗಳಾಗುತ್ತವೆ. ಅದರಲ್ಲಿಯೂ ಮೊಬೈಲ್ ಚಾರ್ಜ್ ಗೆ ಹಾಕುವಾಗ ಎಚ್ಚರಿಕೆ ವಹಿಸಲೇಬೇಕು ಎಂಬುದಕ್ಕೆ ನಿದರ್ಶನ ಇಲ್ಲಿದೆ ನೋಡಿ.

ಅಮೆರಿಕ ಇಲಿನಾಯ್ಸ್ ಪ್ರಾಂತ್ಯದಲ್ಲಿ 13 ವರ್ಷದ ಬಾಲಕಿಯೊಬ್ಬಳು ರೂಂನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಚಾರ್ಜರ್ ಅನಾಹುತ ಸಂಭವಿಸಿದೆ. ಬಾಲಕಿ ಆಟವಾಡುವಾಗ ಚಾರ್ಜ್ ಆಗುತ್ತಿದ್ದ ಮೊಬೈಲ್ ವೈರ್ ಆಕೆಗೆ ತಗುಲಿದೆ. ವೈರ್ ಕುತ್ತಿಗೆ ಭಾಗಕ್ಕೆ ತಗುಲಿದ್ದು, ಅದರಲ್ಲೇನೋ ವ್ಯತ್ಯಾಸವಾಗಿ ಆಕೆಗೆ ಎಲೆಕ್ಟ್ರಿಕ್ ಶಾಕ್ ಹೊಡೆದಿದೆ. ಕುತ್ತಿಗೆಯಲ್ಲಿ ಲೋಹದ ಆಭರಣ ಧರಿಸಿದ್ದರಿಂದ ಬಾಲಕಿ ದೇಹಕ್ಕೆ ವಿದ್ಯುತ್ ಪ್ರವಹಿಸಿದ್ದು, ಕುತ್ತಿಗೆ ಭಾಗಕ್ಕೆ ಹಾನಿಯಾಗಿದೆ. ಇದರಿಂದಾಗಿ ಬಾಲಕಿ ಕಿರುಚಿದ್ದು, ಕೂಡಲೇ ಬಂದ ಪೋಷಕರು ಆಸ್ಪತ್ರೆಗೆ ಸೇರಿಸಿದ್ದಾರೆ.

ಬಾಲಕಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಘಟನೆಗೆ ಮೊಬೈಲ್ ಚಾರ್ಜರ್ ನಲ್ಲಿದ್ದ ದೋಷವೇ ಕಾರಣ ಎನ್ನಲಾಗಿದ್ದು, ಕಂಪನಿಯಿಂದ ಹೊಸ ಫೋನ್ ಹಾಗೂ ಚಾರ್ಜರ್ ಕೊಡಲಾಗಿದೆ. ಅಲ್ಲದೇ, ಬಾಲಕಿಯ ಚಿಕಿತ್ಸಾ ವೆಚ್ಚವನ್ನು ಕಂಪನಿಯೇ ಭರಿಸಲಿದೆ. ಮೊಬೈಲ್ ಚಾರ್ಜ್ ಗೆ ಹಾಕಿದ್ದ ಸಂದರ್ಭದಲ್ಲಿ ಎಚ್ಚರಿಕೆ ವಹಿಸದಿದ್ದರೆ ಹೀಗಾಗುವ ಸಾಧ್ಯತೆಗಳಿರುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...