alex Certify
ಕನ್ನಡ ದುನಿಯಾ       Mobile App
       

Kannada Duniya

ಸೌಂದರ್ಯ ಸ್ಪರ್ಧೆಯ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ ಸುಂದರಿ

model-aa

ಸೌಂದರ್ಯ ಸ್ಪರ್ಧೆಯಲ್ಲಿ ಸಾಮಾನ್ಯವಾಗಿ ಬಳ್ಳಿಯಂತೆ ಬಳಕುವ ಲಲನೆಯರು ಕಾಣಿಸಿಕೊಳ್ಳುತ್ತಾರೆ. ಆದರೆ ಸೌಂದರ್ಯ ಸ್ಪರ್ಧೆಯ ಲೆಕ್ಕಾಚಾರವನ್ನೇ ತಲೆಕೆಳಗಾಗುವಂತೆ ಮಾಡಿದ್ದಾಳೆ ಈ ದಢೂತಿ ಸುಂದರಿ.

24 ವರ್ಷದ ಈಕೆಯ ಹೆಸರು ಇಸ್ತಫಾನಿಯಾ. ಅರ್ಜೆಂಟಿನಾ ಮೂಲದ ಇಸ್ತಫಾನಿಯಾ 5.3 ಅಡಿ ಎತ್ರವಿದ್ದು, 120 ಕೆ.ಜಿ. ತೂಕ ಹೊಂದಿದ್ದಾಳೆ. ‘ಕ್ವೀನ್ ಆಫ್ ವೆಂಡಿಮಿಯಾ’ ಸೌಂದರ್ಯ ಸ್ಪರ್ಧೆಯಲ್ಲಿ ಸ್ಲಿಮ್ ಆಗಿದ್ದ ಸುಂದರಿಯರನ್ನೆಲ್ಲಾ ಹಿಂದಿಕ್ಕಿ ಪ್ರಶಸ್ತಿ ಪಡೆಯುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.

ಫ್ಯಾಷನ್ ಲೋಕದ ನಿರೀಕ್ಷೆಗಳನ್ನೆಲ್ಲಾ ಬದಲಿಸಿಬಿಟ್ಟಿದ್ದಾಳೆ. ಮಾತ್ರವಲ್ಲ, ಸೌಂದರ್ಯ ಸ್ಪರ್ಧೆಯ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಗಮನ ಸೆಳೆದಿದ್ದಾಳೆ.

ಮಾಡೆಲ್ ಗಳೆಂದರೆ ಕಡಿಮೆ ತೂಕ ಹೊಂದಿರಬೇಕು. ಬಳುಕುವ ಸೊಂಟವಿರಬೇಕು ಎಂಬ ಅಭಿಪ್ರಾಯವಿದೆ. ಇದನ್ನು ಬದಲಿಸಬೇಕೆಂಬುದು ನನ್ನ ಅಭಿಲಾಷೆಯಾಗಿದೆ. ನನಗೆ ಬಂದಿರುವ ಈ ಪ್ರಶಸ್ತಿ ನನ್ನಂತೆಯೇ ಇರುವ ಹೆಣ್ಣುಮಕ್ಕಳಿಗೆ ಸ್ಪೂರ್ತಿಯಾಗಲಿ ಎಂದು ಇಸ್ತಫಾನಿಯಾ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...