alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್…! ಇಲ್ಲಿ ಕಾನೂನುಬದ್ಧವಾಗಿ ನಡೆಯುತ್ತೆ ಬಾಲ್ಯ ವಿವಾಹ

ಇತ್ತೀಚೆಗೆ ಮಲೇಷ್ಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾದಂತಾ 11ವರ್ಷದ ಬಾಲಕಿಯ ವಿವಾಹ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಾಧ್ಯಮಗಳ ಒತ್ತಡದಿಂದಾಗಿ ಆ ಬಾಲಕಿ ಥೈಲ್ಯಾಂಡ್ಗೆ ಮರಳಿದ್ದಾಳೆ. ಜೂನ್ನಲ್ಲಿ 11ವರ್ಷದ ಬಾಲಕಿಯನ್ನ 30 ವರ್ಷದ ವ್ಯಾಪಾರಿಯೊಂದಿಗೆ ಮದುವೆ ಮಾಡಲಾಗಿತ್ತು. ಮಲೇಷ್ಯಾದ ಧಾರ್ಮಿಕ ಕಾನೂನುಗಳ ಅಡಿಯಲ್ಲಿ 16ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬಾಲ್ಯ ವಿವಾಹ ಮಾಡುವಂತಾ ಪದ್ಧತಿ ಇದೆ. ಅದರ ಅಡಿಯಲ್ಲಿ ಮದುವೆ ನೆರವೇರಿತ್ತು.

ಆದ್ರೆ ಈ ಬಗ್ಗೆ 41 ವರ್ಷದ ಮತ್ತೊಬ್ಬ ವ್ಯಾಪಾರಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿ ಮದುವೆ ಮತ್ತು ಬಾಲ್ಯ ವಿವಾಹ ಪದ್ಧತಿಯನ್ನು ನಿಷೇಧಿಸಬೇಕು ಅಂತ ಪಟ್ಟು ಹಿಡಿದರು. ಈ ವಿಚಾರ ಸಾಮಾಜಿಕ ಜಾಲತಾಣ ಸೇರಿದಂತೆ ಮಲೇಷ್ಯಾದ ಮಾಧ್ಯಮಗಳಲ್ಲಿ ತುಂಬಾನೇ ಸುದ್ದಿಯಾಗಿತ್ತು. 11ವರ್ಷದ ಬಾಲಕಿ ಆ ವ್ಯಾಪಾರಿಯ ಮೂರನೇ ಪತ್ನಿಯಾಗಿ ಜೂನ್ ನಲ್ಲಿ ಮಲೇಷ್ಯಾಗೆ ಬಂದಿದ್ದಳು.

ಮದುವೆ ಥೈಲ್ಯಾಂಡ್ ನ ನಾಗರಿಕ ಕಾನೂನುಗಳ ಅಡಿಯಲ್ಲಿ ಅಂಗೀಕೃತಗೊಂಡಿಲ್ಲ. ಹಾಗಾಗಿ ವಿವಾಹವನ್ನು ಅನೂರ್ಜಿತಗೊಳಿಸಬೇಕು ಅಂತ ಕೆಲವರು ಪಟ್ಟು ಹಿಡಿದಿದ್ದಾರೆ. ಆದ್ರೆ ಧಾರ್ಮಿಕ ಕಾನೂನಿನ ಅಡಿಯಲ್ಲಿ ನಡೆದಿರುವ ವಿವಾಹಕ್ಕೆ ಅಡ್ಡಿ ಪಡಿಸಲು ಸಾಧ್ಯವಿಲ್ಲ ಅಂತ ಸರ್ಕಾರಿ ಅಧಿಕಾರಿಗಳು ಹೇಳ್ತಿದ್ದಾರೆ. ಸದ್ಯಕ್ಕೆ ಥೈಲ್ಯಾಂಡ್ ಗೆ ಮರಳಿರುವ ಬಾಲಕಿಯನ್ನ ಮನೋ ವೈದ್ಯರ ಬಳಿ ಕೌನ್ಸಿಲಿಂಗ್ ಗಾಗಿ ಕಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...