alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕಾರು ಕಳ್ಳತನದ ಭಯಾನಕ ದೃಶ್ಯ…!

ಪೆಟ್ರೋಲ್ ಬಂಕ್ ನಲ್ಲಿ ಕಾರು ಕದಿಯಲು ಹೋಗಿ ಕಳ್ಳನೊಬ್ಬ ಬಾಲಕಿಯೊಬ್ಬಳ ಜೀವಕ್ಕೆ ಕುತ್ತು ತಂದ ಘಟನೆ ಅಮೆರಿಕಾದಲ್ಲಿ ನಡೆದಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮಾರ್ಕ್ ಬಯಾನ್ಸ್ಕಿ ಎಂಬ ವ್ಯಕ್ತಿ ಪೆಟ್ರೋಲ್ ಬಂಕ್ ನಲ್ಲಿ ತನ್ನ ಕಾರ್ ಗೆ ಪೆಟ್ರೋಲ್ ಹಾಕಿಸುತ್ತಿದ್ದರು. ಮಗಳು ಕಾಯ್ಲಳನ್ನು ಕಾರಿನ ಹಿಂಬದಿ ಸೀಟಿನಲ್ಲಿ ಕೂರಿಸಿ, ಲಾಕ್ ಮಾಡದೇ ಹೋಗಿದ್ರು.

ತಕ್ಷಣವೇ ಅಲ್ಲಿ ಪ್ರತ್ಯಕ್ಷನಾದ ವ್ಯಕ್ತಿಯೊಬ್ಬ ಕಾರಿನಲ್ಲಿ ಕುಳಿತುಕೊಂಡು ಚಲಾಯಿಸಲು ಆರಂಭಿಸಿದ. ಇದ್ರಿಂದ ಒಳಗೆ ಕೂತಿದ್ದ ಕಾಯ್ಲ ಗಾಬರಿಯಿಂದ ಕಿರುಚಲಾರಂಭಿಸಿದಳು. ಕಿಟಕಿ ತಟ್ಟಿದ್ರೂ, ಆತ ನೋಡದೆ ಹಾಗೆ ಚಲಾಯಿಸತೊಡಗಿದ. ತಕ್ಷಣವೇ ಹಿಂಬದಿ ಬಾಗಿಲು ತೆರೆದಿದ್ರಿಂದ ತಮ್ಮ ಮಗಳು ಹೊರಗೆ ಜಿಗಿದಳು ಅಂತಾ ಮಾಧ್ಯಮಗಳಿಗೆ ಮಾರ್ಕ್ ಬಯಾನ್ಸ್ಕಿ ತಿಳಿಸಿದ್ದಾರೆ.

ಅದೃಷ್ಟವಶಾತ್ ಬಾಲಕಿಗೆ ಯಾವುದೇ ಹಾನಿಯಾಗಿಲ್ಲ. ಮೇ 4 ರಂದು ನಡೆದ ಈ ಕೃತ್ಯದ ಸಿಸಿ ಟಿವಿ ದೃಶ್ಯವನ್ನು ಪೊಲೀಸರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...