alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕನನ್ನು ಬಲಿ ಪಡೆದಿದೆ ಮುದ್ದಿನಿಂದ ಸಾಕಿದ್ದ ನಾಯಿ

ಶ್ವಾನಗಳು ಮನುಷ್ಯರ ಬೆಸ್ಟ್ ಫ್ರೆಂಡ್ ಅನ್ನೋ ಮಾತಿದೆ. ಅತ್ಯಂತ ಕೃತಜ್ಞತೆಯುಳ್ಳ ನಿಷ್ಠಾವಂತ ಪ್ರಾಣಿಯೂ ಹೌದು. ಎಲ್ಲರೂ ತಮ್ಮ ಭದ್ರತೆಯಾಗಿ ಮನೆಯಲ್ಲಿ ನಾಯಿಯನ್ನು ಸಾಕೋದು ಸರ್ವೇ ಸಾಮಾನ್ಯ. ಆದ್ರೆ ಕೆಲವೊಂದು ಘಟನೆಗಳು ನಾಯಿಗಳನ್ನೂ ನಂಬದಂತೆ ಮಾಡಿಬಿಡುತ್ತವೆ.

11 ವರ್ಷದ ಬಾಲಕನೊಬ್ಬ ತನ್ನ ಮುದ್ದಿನ ನಾಯಿಯಿಂದ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಆತನ ಮೇಲೆ ದಾಳಿ ಮಾಡಿದ ನಾಯಿ ಕೊಂದು ಹಾಕಿದೆ. ಬಾಲಕನ ದೇಹ ರಕ್ತಸಿಕ್ತವಾಗಿ ಬಿದ್ದಿತ್ತು. ಮೃತ ಬಾಲಕನ ತಂದೆ ರ್ಯಾನ್ ಬೂಸಾ, ಅಲ್ಸೇಶನ್ ಜಾತಿಯ ನಾಯಿಯನ್ನು ಸಾಕಿದ್ರು.

ಆದ್ರೆ ಒಡೆಯ ತನ್ನ ಮೇಲಿಟ್ಟಿದ್ದ ವಿಶ್ವಾಸಕ್ಕೆ ನಾಯಿ ದ್ರೋಹ ಬಗೆದಿದೆ. ಪ್ರೀತಿಯಿಂದ ಸಾಕಿದ ತಪ್ಪಿಗೆ ಮನೆ ಮಗನನ್ನೇ ಕೊಂದು ಹಾಕಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಕಿದ ನಾಯಿಯೇ ಮಗುವನ್ನು ಕೊಂದಿರುವ ಘಟನೆ ಬಗ್ಗೆ ಸಾಮಾಜಿಕ ತಾಣಗಳಲ್ಲೂ ತೀವ್ರ ಆಘಾತ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...