alex Certify
ಕನ್ನಡ ದುನಿಯಾ       Mobile App
       

Kannada Duniya

11 ಮಂದಿಯೊಂದಿಗೆ ಮೊದಲ ರಾತ್ರಿ ಕಳೆದ ಮಾಯಾಂಗನೆ

ಒಬ್ಬರಾದ ಬಳಿಕ ಮತ್ತೊಬ್ಬರು..ಹೀಗೆ 11 ಮಂದಿಯೊಂದಿಗೆ ಮೊದಲ ರಾತ್ರಿ ಕಳೆದ ಥೈಲ್ಯಾಂಡ್ ಮಹಿಳೆಯೊಬ್ಬಳು ಪೊಲೀಸರ ಅತಿಥಿಯಾಗಿದ್ದಾಳೆ.

ಒಬ್ಬರಾದ ನಂತರ ಮತ್ತೊಬ್ಬರಂತೆ ಆಕೆಯನ್ನು ಮದುವೆಯಾಗಿದ್ದ 11 ಮಂದಿ ಹಣ ಕಳೆದುಕೊಂಡು ವಂಚನೆಗೊಳಗಾಗಿ ಪರಿತಪಿಸುತ್ತಿದ್ದಾರೆ.

32 ವರ್ಷದ ಮಹಿಳೆ ಜರಿಯಾಪಾರ್ನ್ ನಯಾಮ್ ವಂಚನೆ ಮಾಡಿದವಳು. ಮೊದಲಿಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಯುವಕರನ್ನು ಪರಿಚಯಿಸಿಕೊಳ್ಳುತ್ತಿದ್ದಳು.

ಬಳಿಕ ಅವರೊಂದಿಗೆ ಗೆಳೆತನ ಬೆಳೆಸಿ ಲೈಂಗಿಕ ಕ್ರಿಯೆಗೆ ಆಹ್ವಾನಿಸುತ್ತಿದ್ದಳು. ಥೈಲ್ಯಾಂಡ್ ನಲ್ಲಿ ವಧುದಕ್ಷಿಣೆ ಕೊಟ್ಟು ಮದುವೆಯಾಗುವ ಸಂಪ್ರದಾಯವಿದ್ದು, ಅದರಂತೆ ಯುವಕರಿಂದ 6000 ಡಾಲರ್ ನಿಂದ 30,000 ಡಾಲರ್ ವರೆಗೆ ವಧು ದಕ್ಷಿಣೆ ಪಡೆದು ಮದುವೆಯಾಗಿದ್ದಾಳೆ.

ಮದುವೆಯಾದ ಮೊದಲ ರಾತ್ರಿ ಕಳೆದು ಪರಾರಿಯಾಗುವುದನ್ನು ರೂಢಿಸಿಕೊಂಡಿದ್ದಾಳೆ. ಈಕೆಯಿಂದ ಮೋಸ ಹೋದ ಯುವಕರು ಸುಮ್ಮನಾಗಿದ್ದಾರೆ.

ಆಗಸ್ಟ್ ತಿಂಗಳೊಂದರಲ್ಲೇ ಬರೋಬ್ಬರಿ ನಾಲ್ವರನ್ನು ಮದುವೆಯಾಗಿದ್ದಾಳೆ ಎಂದರೆ, ಈಕೆ ಎಂತಹ ಚಾಲಾಕಿ ಇರಬಹುದೆಂಬುದನ್ನು ಊಹಿಸಿ.

ಓಡಿಹೋಗುವ ವಧು ಎಂದು ಮೋಸ ಹೋದ ಯುವಕನೊಬ್ಬ ಫೇಸ್ ಬುಕ್ ನಲ್ಲಿ ಈಕೆಯ ಫೋಟೋ ಹಾಕಿದ ಬಳಿಕ ಮದುವೆಯಾಗಿ ಮೋಸ ಹೋದವರೆಲ್ಲಾ ಪೊಲೀಸರ ಮೊರೆ ಹೋಗಿದ್ದಾರೆ.

ಥೈಲ್ಯಾಂಡ್ ನ ನಖೋನ್ ಪಾಥೋಮ್ ಪ್ರಾಂತ್ಯದಲ್ಲಿ ಪೊಲೀಸರು ವಂಚಕಿಯನ್ನು ಬಂಧಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಹಿಂದೆಯೇ ಮದುವೆಯಾಗಿದ್ದ ಆಕೆ 11 ಮಂದಿ ಮದುವೆಯಾಗಿ ವಂಚಿಸಿರುವುದನ್ನು ತಿಳಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...