alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಕೈ ಡೈವಿಂಗ್ ನಲ್ಲಿ ದಾಖಲೆ ಮಾಡಿದ್ದಾನೆ ಈ ವ್ಯಕ್ತಿ

old

ಸ್ಕೈ ಡೈವಿಂಗ್ ಅತ್ಯಂತ ಸಾಹಸಮಯ ಕ್ರೀಡೆ. ಪ್ರಾಣವನ್ನೇ ಪಣಕ್ಕಿಟ್ಟು ಮಾಡುವ ಸಾಹಸ. ವಿಮಾನದಿಂದ ಕೆಳಕ್ಕೆ ಜಂಪ್ ಮಾಡೋದನ್ನು ನೆನೆಸಿಕೊಂಡ್ರೇನೇ ಎದೆ ಢವಢವಿಸುತ್ತೆ. ಆದ್ರೆ ಲಂಡನ್ ನಲ್ಲಿ ನೀವು ಊಹಿಸಿಕೊಳ್ಳಲೂ ಆಗದಂತಹ ದಾಖಲೆಯೊಂದನ್ನು ವೃದ್ಧನೊಬ್ಬ ಮಾಡಿದ್ದಾನೆ.

101 ವರ್ಷದ ಹಿರಿಯಜ್ಜ ಸ್ಕೈ ಡೈವಿಂಗ್ ಮಾಡುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾನೆ. ವರ್ಡನ್ ಹೇಯ್ಸ್ ಗೆ ಈಗ 101 ವರ್ಷ 38 ದಿನಗಳ ಪ್ರಾಯ. ಸ್ಕೈ ಡೈವಿಂಗ್ ಮಾಡಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಈತ ಪಾತ್ರವಾಗಿದ್ದಾನೆ. ಮೊದಲು ಈ ದಾಖಲೆ ಕೆನಡಾದ ವ್ಯಕ್ತಿಯ ಹೆಸರಲ್ಲಿತ್ತು. ಸ್ಕೈ ಡೈವಿಂಗ್ ಮಾಡಿದಾಗ ಆತನಿಗೆ 101 ವರ್ಷ 3 ದಿನಗಳ ಪ್ರಾಯವಾಗಿತ್ತು.

ಆ ದಾಖಲೆಯನ್ನು ಪುಡಿಗಟ್ಟಿರುವ ವರ್ಡನ್ ಹೇಯ್ಸ್, 15,000 ಅಡಿ ಎತ್ತರದಿಂದ ವಿಮಾನದ ಮೂಲಕ ಕೆಳಕ್ಕೆ ಜಂಪ್ ಮಾಡಿದ್ದಾನೆ. ಇನ್ನೂ ಕುತೂಹಲಕರ ಸಂಗತಿ ಅಂದ್ರೆ ಸ್ಕೈ ಡೈವಿಂಗ್ ನಲ್ಲಿ ಈತನ ಮೊಮ್ಮಗ ಕೂಡ ಕಮ್ಮಿಯೇನಿಲ್ಲ. 16ರ ಹರೆಯದ ಸ್ಟೇನ್ಲಿ ಕೂಡ ಸ್ಕೈ ಡೈವಿಂಗ್ ಮಾಡಿದ ಅತ್ಯಂತ ಕಿರಿಯ ಅನ್ನೋ ದಾಖಲೆ ಮಾಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...