alex Certify
ಕನ್ನಡ ದುನಿಯಾ       Mobile App
       

Kannada Duniya

100 ವರ್ಷದ ವೃದ್ಧೆ ಮೇಲೆ ಕಳ್ಳನಿಂದ ಮಾರಣಾಂತಿಕ ಹಲ್ಲೆ

ಬ್ರಿಟನ್ ನಿವಾಸಿಯಾಗಿದ್ದ ಪೊಲೀಶ್ ಮೂಲದ 100 ವರ್ಷದ ವೃದ್ದೆಯೊಬ್ಬರು ಕಳ್ಳನೊಬ್ಬನಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದಾರೆ. ಲಂಡನ್ ನ ಬ್ರೇಜರ್ ಮಾರುಕಟ್ಟೆ ಬಳಿ ವ್ಯಕ್ತಿಯೋರ್ವ ವೃದ್ದೆಯ ಬ್ಯಾಗನ್ನು ಕಳ್ಳತನ ಮಾಡುವ ವೇಳೆ ಆಕೆಯನ್ನು ಜೋರಾಗಿ ನೆಲಕ್ಕೆ ತಳ್ಳಿದ್ದು, ಗಾಯಗೊಂಡಿದ್ದ ವೃದ್ದೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಕುತ್ತಿಗೆಗೆ ಭಾರೀ ಪೆಟ್ಟು ಬಿದ್ದಿದ್ದರಿಂದ ತಡರಾತ್ರಿ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿದೆ. ಮೃತ ವೃದ್ಧೆಯ ಹೆಸರು ಜೋಫಿಕಾ ಕಾಗ್ಜನ್ ಎಂದು ತಿಳಿದುಬಂದಿದೆ. ಕಳೆದ ಮೇ 28 ರಂದು ಡರ್ಬಿ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಡರ್ಬಿ ಪೊಲೀಸರು ಬಂಧಿಸಿದ್ದರು.

ನಂತರ ಪೊಲೀಸರು ಆತನನ್ನು ಬಿಡುಗಡೆಗೊಳಿಸಿದ್ದಾರೆ. ವೃದ್ದೆಯನ್ನು ಆಸ್ಪತ್ರೆಗೆ ಸೇರಿಸಿದಾಗ, ಅಂತಹ ಗಂಭೀರ ಪೆಟ್ಟಾಗಿಲ್ಲವೆಂದು ಭಾವಿಸಲಾಗಿತ್ತು. ಅಲ್ಲದೇ ವೃದ್ದೆ ಚೇತರಿಸಿಕೊಳ್ಳಲಿದ್ದಾರೆಂಬ ವಿಶ್ವಾಸ ಪೊಲೀಸರಿಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಈಗ ಸಾವಿಗೀಡಾಗಿದ್ದಾರೆಂದು ಪೊಲೀಸರ ವರದಿಯಲ್ಲಿ ತಿಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...