alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಪ್ರಯಾಣದ ವೇಳೆ ನೂರಕ್ಕೂ ಅಧಿಕ ಮಂದಿ ಅಸ್ವಸ್ಥ

ದುಬೈನಿಂದ ಅಮೆರಿಕದ ನ್ಯೂಯಾರ್ಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾರಿದ ವಿಮಾನದಲ್ಲಿನ ಬಹುತೇಕ ಪ್ರಯಾಣಿಕರಿಗೆ ಅನಾರೋಗ್ಯ ಸಮಸ್ಯೆ ಕಾಡಿದಂತಾ ವಿಚಿತ್ರ ಘಟನೆ ನಡೆದಿದೆ. ಯುಎಇ ನ 203 ವಿಮಾನ 521 ಪ್ರಯಾಣಿಕರೊಂದಿಗೆ ನ್ಯೂಯಾರ್ಕ್ ನತ್ತ ಹಾರಾಟ ಶುರುಮಾಡಿತ್ತು.

ವಿಮಾನ ಹಾರಾಟ ಶುರುಮಾಡಿದ ಕೆಲವೇ ಗಂಟೆಗಳಲ್ಲಿ ಸುಮಾರು 100 ಮಂದಿ ಪ್ರಯಾಣಿಕರು ಅನಾರೋಗ್ಯಕ್ಕೀಡಾಗಿದ್ದಾರೆ. ಕೆಮ್ಮು ಮತ್ತು ಜ್ವರದೊಂದಿಗೆ ಬಳಲಿದ ಸುಮಾರು 100 ಮಂದಿ ಪ್ರಯಾಣಿಕರು ಆನಂತರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದರಲ್ಲಿ 10 ಮಂದಿ ಪ್ರಯಾಣಿಕರನ್ನು ದುಬೈ ವಿಮಾನ ನಿಲ್ದಾಣ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ಕೂಡ ಇಂತದ್ದೇ ಘಟನೆ ನಡೆದಿದೆ. ಹಲವು ಮಂದಿ ಪ್ರಯಾಣಿಕರನ್ನು ಜಮೈಕಾದ ಹಾಸ್ಪಿಟಲ್ ಮತ್ತು ಮೆಡಿಕಲ್ ಕೇರ್ ಯೂನಿಟ್ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಯಾಣಿಕರ ಜೀವಕ್ಕೆ ಯಾವುದೇ ಅಪಾಯ ಇಲ್ಲ ಅಂತ ಆಸ್ಪತ್ರೆ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.

ದಿಢೀರನೆ ಪ್ರಯಾಣಿಕರು ಅಸ್ವಸ್ಥರಾಗೋದಕ್ಕೆ ಕಾರಣ ಏನು ಅನ್ನೋದನ್ನ ಪತ್ತೆ ಹಚ್ಚೋಕೆ ಈಗ ವೈದ್ಯರು ಮುಂದಾಗಿದ್ದಾರೆ. ಅಮೆರಿಕದ ಆರೋಗ್ಯ ಇಲಾಖೆ ಮತ್ತು ದುಬೈ ಆರೋಗ್ಯ ಇಲಾಖೆ ಕೂಡ ಈ ಬಗ್ಗೆ ತನಿಖೆ ನಡೆಸೋಕೆ ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...