alex Certify
ಕನ್ನಡ ದುನಿಯಾ       Mobile App
       

Kannada Duniya

ಐನ್ ಸ್ಟೀನ್ ರನ್ನೂ ಹಿಂದಿಕ್ಕಿದ್ದಾನೆ ಭಾರತೀಯ ಮೂಲದ ಬಾಲಕ

ಬ್ರಿಟನ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ 10 ವರ್ಷದ ಬಾಲಕ ಮೆನಸ್ ಐಕ್ಯೂ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಅತಿ ಕಿರಿಯ ಎನಿಸಿಕೊಂಡಿದ್ದಾನೆ. ಆಲ್ಬರ್ಟ್ ಐನ್ ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್ ರಂತಹ ಖ್ಯಾತ ವಿಜ್ಞಾನಿಗಳನ್ನೇ ಹಿಂದಿಕ್ಕಿದ್ದಾನೆ.

ಮೆಹುಲ್ ಗರ್ಗ್, ಇವನ ನಿಕ್ ನೇಮ್ ಮಾಹಿ. ಈತನ ಅಣ್ಣ ಧ್ರುವ ಗರ್ಗ್ ಕೂಡ ಕಳೆದ ವರ್ಷ ಐಕ್ಯೂ ಟೆಸ್ಟ್ ನಲ್ಲಿ 162 ಅಂಕ ಗಳಿಸಿದ್ದ. ಅವನಿಗೆ ಈಗ 13 ವರ್ಷ. ಆದ್ರೆ 10ನೇ ವಯಸ್ಸಿನಲ್ಲಿಯೇ ಅಣ್ಣನಷ್ಟೇ ಅಂಕ ಗಳಿಸುವ ಮೂಲಕ ಮಾಹಿ ಹೊಸ ದಾಖಲೆ ನಿರ್ಮಿಸಿದ್ದಾನೆ.

ಐನ್ ಸ್ಟೀನ್ ಹಾಗೂ ಸ್ಟೀಫನ್ ಹಾಕಿಂಗ್ ರಿಗಿಂತ 2 ಅಂಕ ಹೆಚ್ಚು ಗಳಿಸಿದ್ದಾನೆ. ಪರೀಕ್ಷೆಗೆ ತೆರಳುವಾಗ ಮಾಹಿ ತುಂಬಾ ನರ್ವಸ್ ಆಗಿದ್ದನಂತೆ. ಆದ್ರೆ ಒಂದೆರಡು ಲೆಕ್ಕವನ್ನು ಬಿಡಿಸುತ್ತಿದ್ದಂತೆ ಅವನಲ್ಲಿ ಆತ್ಮವಿಶ್ವಾಸ ಬಂದಿತ್ತು. ಕ್ರಿಕೆಟ್ ಮತ್ತು ಐಸ್ ಸ್ಕೇಟಿಂಗ್ ಅಂದ್ರೆ ಮಾಹಿಗೆ ಅಚ್ಚುಮೆಚ್ಚು.

ಡ್ರಮ್ಸ್ ಕೂಡ ಬಾರಿಸ್ತಾನೆ. ಗಣಿತ ಇವನ ಫೇವರಿಟ್ ವಿಷಯ. ಭವಿಷ್ಯದಲ್ಲಿ ಗೂಗಲ್ ನಂತಹ ದೊಡ್ಡ ಕಂಪನಿಯನ್ನು ಮುನ್ನಡೆಸಬೇಕು ಎಂಬ ಗುರಿ ಹೊಂದಿದ್ದಾನೆ. ಚೈಲ್ಡ್ ಜೀನಿಯಸ್ -2018 ಸ್ಪರ್ಧೆಯಲ್ಲಿ ಭಾಗವಹಿಸಲು ತಯಾರಿ ಮಾಡಿಕೊಳ್ತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...