alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ವೀಸಾದಲ್ಲಿ ಅಮೆರಿಕಾದಲ್ಲಿ ವಾಸಿಸುತ್ತಿದ್ದ 10 ಮಂದಿ ಭಾರತೀಯರ ಅರೆಸ್ಟ್

dc-Cover-g9b8l508h0ij2ehp5541fctj51-20160317152804.Medi

ನಕಲಿ ವೀಸಾ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಭಾರತೀಯರೂ ಸೇರಿದಂತೆ 21 ಮಂದಿಯನ್ನು ಅಮೆರಿಕಾದಲ್ಲಿ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತೀಚೆಗೆ ಅಮೆರಿಕಾದಲ್ಲಿ ನಕಲಿ ವೀಸಾದ ಮೇಲೆ ವಾಸಿಸುವರ ಸಂಖ್ಯೆ ಹೆಚ್ಚುತ್ತಿದ್ದು, ಅದರಲ್ಲಿಯೂ ವಿದ್ಯಾಭ್ಯಾಸದ ಹೆಸರಿನಲ್ಲಿಯೇ 26 ರಾಷ್ಟ್ರದ ಸಾವಿರಾರು ಮಂದಿ ನೆಲೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಅಮೆರಿಕಾ ಕಾರ್ಯಾಚರಣೆ ನಡೆಸಲು ಮುಂದಾಗಿದ್ದು, ನಕಲಿ ವೀಸಾದ ಮೇಲೆ ವಾಸಿಸುತ್ತಿರುವವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಿದೆ.

ಅಲ್ಲದೇ ಅಮೆರಿಕಾದ ಜಾರಿ ನಿರ್ದೇಶನಾಲಯ ದಳದ ಪೊಲೀಸರು ವಾಷಿಂಗ್ಟನ್‌, ನ್ಯೂಯಾರ್ಕ್‌, ವರ್ಜಿನಿಯಾ ಸೇರಿದಂತೆ ಹಲವು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ 10 ಮಂದಿ ಭಾರತೀಯರೂ ಸೇರಿದಂತೆ ಒಟ್ಟು 21 ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಅಚ್ಚರಿಯೆಂದರೆ ಈ ಬಂಧಿತರಲ್ಲಿ ಹೆಚ್ಚಿನವರು ಅಮೆರಿಕದ ರಾಯಭಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...