alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ವ್ಯಾಸಂಗದ ಕುರಿತ ‘ಶಾಕಿಂಗ್’ ಸತ್ಯ ಬಹಿರಂಗ

ಜಗತ್ತಿನ ಪ್ರತಿ ಐವರು ಮಕ್ಕಳಲ್ಲಿ ಒಂದು ಮಗು ಶಾಲೆಯ ಮುಖವನ್ನೇ ನೋಡುತ್ತಿಲ್ಲ ಎಂಬ ಆಘಾತಕಾರಿ ಸಂಗತಿಯನ್ನು ಯುನಿಸೆಫ್ ಹೊರಗೆಡಹಿದೆ.

ವಿಶ್ವಸಂಸ್ಥೆಯ 73ನೇ ಸಾಮಾನ್ಯ ಸಭೆಯ ಪೂರ್ವದಲ್ಲಿ ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ ಜಾಗತಿಕ ಮಕ್ಕಳ ಕುರಿತ ವರದಿ, ಎ ಫ್ಯೂಚರ್ ಸ್ಟೋಲನ್: ಯಂಗ್ ಆಂಡ್ ಔಟ್ ಆಫ್ ಸ್ಕೂಲ್ ಅನ್ನು ಬಿಡುಗಡೆಗೊಳಿಸಿದೆ.

ಐದರಿಂದ 17 ವರ್ಷ ವಯಸ್ಸಿನ ನಡುವಿನ ಒಟ್ಟಾರೆ 30.3 ಕೋಟಿ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಇವರ ಪೈಕಿ ಮೂರನೇ ಒಂದರಷ್ಟು ಮಕ್ಕಳು, ಅಂದರೆ 10 ಕೋಟಿ ಮಕ್ಕಳು ಸಂಘರ್ಷ ಅಥವಾ ವಿಪತ್ತು ಪೀಡಿತ ದೇಶಗಳಿಗೆ ಸೇರಿದವರಾಗಿದ್ದಾರೆ.

ಸಂಘರ್ಷ ಅಥವಾ ವಿಪತ್ತುಪೀಡಿತ ದೇಶಗಳಲ್ಲಿನ 15 ಮತ್ತು 17 ವಯಸ್ಸಿನ ನಡುವಿನ ಐವರಲ್ಲಿ ಒಂದು ಮಗು ಯಾವತ್ತೂ ಶಾಲೆ ಪ್ರವೇಶಿಸಿಯೇ ಇಲ್ಲ ಮತ್ತು ಐವರಲ್ಲಿ ಇಬ್ಬರು ಪ್ರಾಥಮಿಕ ಶಾಲೆ ಪೂರ್ಣಗೊಳಿಸಿಲ್ಲ ಎಂದು ಈ ವರದಿಯಲ್ಲಿ ಯುನಿಸೆಫ್ ಹೇಳಿದೆ.

“ದೇಶವೊಂದು ಯುದ್ಧ ಅಥವಾ ವಿಪತ್ತಿಗೆ ತುತ್ತಾದರೆ ಅದರ ಮಕ್ಕಳು ಮತ್ತು ಯುವ ಜನತೆಗೆ ಮೊದಲ ಏಟು ಬೀಳುತ್ತದೆ, ಅವರ ಶಾಲೆ ಹಾನಿಗೊಳ್ಳುತ್ತದೆ, ನಾಶವಾಗುತ್ತದೆ, ಮಿಲಿಟರಿ ಆಕ್ರಮಿಸಿಕೊಳ್ಳುತ್ತದೆ. ಅಥವಾ ಮಕ್ಕಳನ್ನು ಗುರಿಯಾಗಿ ದಾಳಿ ನಡೆಸಲಾಗುತ್ತದೆ. ಇದರಿಂದಾಗಿ ಬಡತನದ ಆವೃತ್ತಿ ಶಾಶ್ವತವಾಗುತ್ತದೆ ಎಂದು ಯುನಿಸೆಫ್‌ನ ಕಾರ್ಯಕಾರಿ ನಿರ್ದೇಶಕಿ ಹೆನ್ರಿಟ್ಟಾ ಫೋರ್ ಆತಂಕ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...