alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆ ಕ್ಷಣದಲ್ಲಿ ಈತನಿಗೆ ಸಿಕ್ತು ಕೋಟಿ ಕೋಟಿ ರೂಪಾಯಿ

ಯಾವುದನ್ನು ಕಸವೆಂದು ಕಾಣಬಾರದು ಎನ್ನುವುದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಹೌದು, ಅಮೆರಿಕಾ ಮೂಲದ‌ ಲಾಟರಿ ಸಂಸ್ಥೆಯಾಗಿರುವ ಲೋಟೋದಲ್ಲಿ ಗ್ರೆಗೋರಿಯೋ ಡಿ ಸ್ಯಾಂಟೀಸ್ ಎನ್ನುವ ವ್ಯಕ್ತಿ ಖರೀದಿಸಿದ್ದ ಲಾಟರಿ ಟಿಕೆಟ್ ಗೆ 1.35 ಮಿಲಿಯನ್ ಡಾಲರ್ ಬಹುಮಾನ ಬಂದಿದ್ದರೂ, ಅದನ್ನು ನೋಡಿಕೊಳ್ಳದೇ ಜೇಬಿನಲ್ಲಿಯೇ ಇಟ್ಟುಕೊಂಡಿದ್ದಾನೆ. ಲಾಟರಿ ಮೊತ್ತ ಪಡೆಯಲು ಕೆಲವೇ ದಿನವಿರುವಾಗ ಹಳೆ ಬಟ್ಟೆ ಬಿಸಾಕುವಾಗ ಪರಿಶೀಲನೆ ನಡೆಸಿದ್ದು, ಲಾಟರಿ ಪಡೆದಿರುವುದು ಗಮನಿಸಿದ್ದಾನೆ.

ಬಳಿಕ ತನ್ನ ಬಳಿಯಿರುವ ಲಾಟರಿ ಚೀಟಿಯಲ್ಲಿದ್ದ ಸಂಖ್ಯೆಗೆ ಬಹುಮಾನ ಬಂದಿರುವುದು ಖಾತ್ರಿಯಾಗುತ್ತಿದ್ದಂತೆ, ಲೋಟೋ ಅಧಿಕಾರಿಗಳ ಬಳಿ ಸಂಪರ್ಕಿಸಿದ ಬಳಿಕವೇ ಈ ಲಾಟರಿ ಚೀಟಿಗೆ 1.35 ಮಿಲಿಯನ್ ಡಾಲರ್ ಬಂದಿದೆ ಎಂದು ತಿಳಿದಿದೆ.

ಡಿ. 6 ರಂದು ಒಟ್ಟು ನಾಲ್ವರಿಗೆ 5.4 ಮಿಲಿಯನ್ ಡಾಲರ್ ಮೊತ್ತದ ಅದೃಷ್ಠ ಖುಲಾಯಿಸಿದೆ. ಆದರೆ ಇದರಲ್ಲಿ‌ ಮೂವರು ತಮ್ಮ ಬಹುಮಾನ ಮೊತ್ತವನ್ನು ಪಡೆದುಕೊಂಡಿದ್ದಾರೆ. ಆದರೆ ಗೆದ್ದಿರುವ ಬಗ್ಗೆ ಮಾಹಿತಿ ಇಲ್ಲದ‌ ಗ್ರೆಗೋರಿಯೋ ಅಂತಿಮ ಕ್ಷಣದಲ್ಲಿ ಹಣ ಪಡೆದಿದ್ದಾರೆ. ಈ ಬಗ್ಗೆ ಗ್ರೆಗೋರಿಯೋ ಪ್ರತಿಕ್ರಿಯಿಸಿದ್ದು, ಲಾಟರಿ ಚೀಟಿ ಪಡೆದಿರುವುದನ್ನು ಜೇಬಿನಲ್ಲಿಟ್ಟು ಮರೆತಿದ್ದೆ. ಆದರೆ ಸಹೋದರಿ ಬಟ್ಟೆಯನ್ನು ಅನಾಥಶ್ರಮಕ್ಕೆ ನೀಡಬೇಕೆಂದು ಹಳೆ ಬಟ್ಟೆಗಳನ್ನು ಕೇಳಿದಾಗ, ಈ ಟಿಕೆಟ್ ಸಿಕ್ಕಿತ್ತು. ಅಧಿಕಾರಿಗಳು ಬಹುಮಾನ ಮೊತ್ತ ಹೇಳಿದಾಗ ಒಂದು ಕ್ಷಣ ಹೃದಯ ನಿಂತಂತಾಯಿತು ಎಂದಿದ್ದಾನೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...