alex Certify
ಕನ್ನಡ ದುನಿಯಾ       Mobile App
       

Kannada Duniya

ಹಸಿರು ಬಣ್ಣದ ಮರಿಗೆ ಜನ್ಮ ನೀಡಿದ ನಾಯಿ..!

green-puppy

ಹಾಲಿವುಡ್ ನ ಹಲ್ಕ್ ಚಿತ್ರದ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡ ನಾಯಿ ಎಲ್ಲರ ಗಮನ ಸೆಳೆದಿತ್ತು. ಹಸಿರು ಬಣ್ಣದಲ್ಲಿದ್ದ ನಾಯಿ ಎಲ್ಲರ ಮೆಚ್ಚುಗೆ ಗಳಿಸಿತ್ತು. ಹಸಿರು ಬಣ್ಣದ ನಾಯಿ ರೀಲ್ ನಲ್ಲಿ ಮಾತ್ರ ಎಂದುಕೊಂಡವರು ಆಶ್ಚರ್ಯಗೊಳ್ಳುವಂತಹ ಸುದ್ದಿಯೊಂದು ಬಂದಿದೆ.

ಬ್ರಿಟನ್ ನ  ಲೂಯಿಸ್ ಸದರ್ಲೆಂಡ್ ನಲ್ಲಿರುವ ನಾಯಿಯೊಂದು ಹಸಿರು ಬಣ್ಣದ ನಾಯಿ ಮರಿಗೆ ಜನ್ಮ ನೀಡಿದೆ. ಇದನ್ನು ನೋಡಿ ಲೂಯಿಸ್ ಆಶ್ಚರ್ಯಪಟ್ಟಿದ್ದಾಳೆ. ಸುದ್ದಿ ಸ್ಥಳೀಯ ಮಾಧ್ಯಮದಲ್ಲಿ ಬರ್ತಿದ್ದಂತೆ ನಾಯಿ ನೋಡಲು ಜನರು ಲೂಯಿಸ್ ಮನೆ ಮುಂದೆ ಕ್ಯೂ ನಿಂತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿಯೂ ಈ ಸುದ್ದಿ ಚರ್ಚೆಯಾಗ್ತಿದೆ. ಹಸಿರು ನಾಯಿ ಮರಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಲೂಯಿಸ್ ಸಾಕಿರುವ ಗೋಲ್ಡನ್ ರಿಟ್ರೀವರ್ ನಾಯಿ 9 ಮರಿಗಳಿಗೆ ಜನ್ಮ ನೀಡಿದೆ. ಹೆರಿಗೆ ನಂತ್ರ ನಾಯಿ ಮರಿಗಳನ್ನು ಸ್ವಚ್ಛಗೊಳಿಸಿದ್ದಾಳೆ ಲೂಯಿಸ್. ಈ ವೇಳೆ ಹಸಿರು ಬಣ್ಣದ ನಾಯಿಮರಿ ಕಣ್ಣಿಗೆ ಬಿದ್ದಿದೆ. ಅನುಮಾನಗೊಂಡು ಮತ್ತೊಮ್ಮೆ ಸ್ವಚ್ಛಗೊಳಿಸಿದ್ದಾಳೆ ಲೂಯಿಸ್. ಆದ್ರೂ ಬಣ್ಣ ಬದಲಾಗಲಿಲ್ಲ.

ನಾಯಿ ಮರಿ ದೊಡ್ಡದಾಗ್ತಿದ್ದಂತೆ ಬಣ್ಣ ಬದಲಾಗುತ್ತದೆ. ವಿಶ್ವದಲ್ಲಿ ಇದು ಮೂರನೇ ಘಟನೆಯಾಗಿದೆ. ನಾಯಿ ಬಣ್ಣ ನೋಡಿ ಅದಕ್ಕೆ ಫಾರೆಸ್ಟ್ ಎಂದು ಹೆಸರಿಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...