alex Certify
ಕನ್ನಡ ದುನಿಯಾ       Mobile App
       

Kannada Duniya

ಯಾಕೆ ಸೆಕ್ಸ್ ಡಾಲ್ ಗಳನ್ನು ಸಂಗಾತಿ ಮಾಡಿಕೊಳ್ತಿದ್ದಾರೆ ಜಪಾನಿಯರು…?

ಹೆಚ್ಚಾಗುತ್ತಿರುವ ವಯಸ್ಸು, ಹುಡುಗರಿಗಿಂತ ಕಡಿಮೆಯಾಗ್ತಿರುವ ಹುಡುಗಿಯರ ಪ್ರಮಾಣ, ಏಕಾಂಗಿತನ ಜಪಾನ್ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಜಪಾನಿನ ಪುರುಷರು ಒಂಟಿತನದಿಂದ ಬೇಸತ್ತಿದ್ದಾರೆ. ಏಕಾಂಗಿತನದಿಂದ ಹೊರಬರಲು ಹೊಸ ಮಾರ್ಗವೊಂದನ್ನು ಜಪಾನಿನ ಪುರುಷರು ಅನುಸರಿಸುತ್ತಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ಮದುವೆಯಾಗದೆ ಉಳಿದಿರುವ ಜಪಾನಿನ ಪುರುಷರು ಸೆಕ್ಸ್ ಡಾಲ್ ಖರೀದಿ ಮಾಡ್ತಿದ್ದಾರೆ. ಸೆಕ್ಸ್ ಡಾಲ್ ಗಳನ್ನೇ ಸಂಗಾತಿಗಳನ್ನಾಗಿ ಆಯ್ಕೆ ಮಾಡಿಕೊಳ್ತಿದ್ದಾರೆ. ಮಹಿಳೆ ಜೊತೆ ಜೀವನ ಸಾಗಿಸುವಂತೆ ಸೆಕ್ಸ್ ಡಾಲ್ ಜೊತೆ ಜೀವನ ನಡೆಸುತ್ತಿದ್ದಾರೆ.

ಪ್ರತಿ ವರ್ಷ ಜಪಾನಿನಲ್ಲಿ 2 ಸಾವಿರಕ್ಕೂ ಹೆಚ್ಚು ಸೆಕ್ಸ್ ಡಾಲ್ ಮಾರಾಟವಾಗ್ತಿದೆ. ಪ್ರತಿ ವರ್ಷ ಇದ್ರ ಸಂಖ್ಯೆ ಹೆಚ್ಚಾಗ್ತಿದೆ. ಯುವಕರಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯಸ್ಸಿನ ಜನರೂ ಒಂಟಿತನ ದೂರ ಮಾಡಲು ಸೆಕ್ಸ್ ಡಾಲ್ ಖರೀದಿ ಮಾಡುತ್ತಿದ್ದಾರೆ. ನಗು ಹಾಗೂ ಮಾತನಾಡುವ ಡಾಲ್ ಗಳಿಗೆ ಬೇಡಿಕೆ ಹೆಚ್ಚಿದೆ. ರೋಬೋಟ್ ಸೆಕ್ಸ್ ಡಾಲ್ ಬೆಲೆ 6,000 ಡಾಲರ್.

ಒಂಟಿತನ ಜೀವನೋತ್ಸಾಹವನ್ನು ಕಡಿಮೆ ಮಾಡುತ್ತದೆ. ಮಹಿಳೆಯರ ಸಂಖ್ಯೆ ಕಡಿಮೆಯಿರೋದ್ರಿಂದ ಅನೇಕ ಪುರುಷರಿಗೆ ಮದುವೆ ಭಾಗ್ಯ ಸಿಗ್ತಿಲ್ಲ. ಅಂಥವರು ಸೆಕ್ಸ್ ಡಾಲ್ ಖರೀದಿ ಮಾಡುತ್ತಿದ್ದಾರೆಂದು ಜಪಾನಿನ ಜನರು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...