alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿ ಖಾಸಗಿ ಅಂಗ ಕತ್ತರಿಸಿದ ತಂದೆ

ಅತ್ಯಾಚಾರ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಭಾರತ ಮುಂದಾಗಿದೆ. ಅತ್ಯಾಚಾರಿ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುತ್ತಿದೆ. ಆದ್ರೆ ದಿನ ದಿನಕ್ಕೂ ಅತ್ಯಾಚಾರ ಪ್ರಕರಣ ಹೆಚ್ಚಾಗ್ತಿದೆ. ಅತ್ಯಾಚಾರಿಗಳಿಗೆ ಸ್ಥಳದಲ್ಲಿಯೇ ಶಿಕ್ಷೆ ನೀಡಬೇಕು. ಅವ್ರ ಖಾಸಗಿ ಅಂಗ ಕತ್ತರಿಸಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು. ಈಗ ಇಂಥಹ ಘಟನೆಯೂ ನಡೆದಿದೆ.

ಘಟನೆ ನಡೆದಿರೋದು ಭಾರತದಲ್ಲಲ್ಲ, ದಕ್ಷಿಣ ಆಫ್ರಿಕಾದಲ್ಲಿ. ಒಂಭತ್ತು ವರ್ಷದ ಮಗುವಿನ ಮೇಲೆ ಧರ್ಮಗುರುವೊಬ್ಬ ಅತ್ಯಾಚಾರವೆಸಗಿದ್ದ. ಇದ್ರಿಂದ ಕೋಪಗೊಂಡ ಬಾಲಕಿ ತಂದೆ, ಅತ್ಯಾಚಾರಿಯ ಖಾಸಗಿ ಅಂಗ ಕತ್ತರಿಸಿದ್ದಾನೆ. ಘಟನೆ ನಂತ್ರ ಆರೋಪಿ ಸಾವನ್ನಪ್ಪಿದ್ದಾನೆಂದು ಪೊಲೀಸರು ಹೇಳಿದ್ದಾರೆ.

ಮಗಳ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಸ್ನೇಹಿತರ ಜೊತೆ ಸೇರಿ ತಂದೆ ಪತ್ತೆ ಹಚ್ಚಿದ್ದಾನೆ. ನಂತ್ರ ಆರೋಪಿ ಮೇಲೆ ಹಲ್ಲೆ ನಡೆಸಿ ಖಾಸಗಿ ಅಂಗ ಕತ್ತರಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಧರ್ಮಗುರುವನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲ ನೀಡಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...