alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳನ್ನು ಬಿಟ್ಟು ಹೋದಾಕೆ 42 ವರ್ಷಗಳ ಬಳಿಕ ಪತ್ತೆ

lulaತಾಯಿಯಾದವಳು ಹೆತ್ತ ಮಕ್ಕಳನ್ನು ಅರೆ ಕ್ಷಣವೂ ಬಿಟ್ಟಿರಲಾರಳು ಎನ್ನುತ್ತಾರೆ. ಆದರೆ ಇಲ್ಲೊಬ್ಬ ಮಹಾತಾಯಿ ಕ್ಷುಲ್ಲಕ ಕಾರಣಕ್ಕಾಗಿ 42 ವರ್ಷಗಳ ಹಿಂದೆ ತನ್ನ ಮೂವರು ಮಕ್ಕಳನ್ನು ಬಿಟ್ಟು ಹೋಗಿದ್ದು, ಇದೀಗ ಜೀವಂತವಾಗಿ ಪತ್ತೆಯಾಗಿದ್ದಾಳೆ.

ಅಮೆರಿಕಾದ ಇಂಡಿಯಾನಾ ಪ್ರಾಂತ್ಯದ ನಿವಾಸಿಯಾಗಿದ್ದ ಲೂಲಾ ಆನ್, 28 ವರ್ಷಕ್ಕಾಗಲೇ ಮೂವರು ಮಕ್ಕಳನ್ನು ಹೆತ್ತಿದ್ದಳು. ಈಕೆ ಚಿಕ್ಕ ವಯಸ್ಸಿನಲ್ಲೇ ಮೂರು ಮಕ್ಕಳಿಗೆ ತಾಯಿಯಾಗಿದ್ದೇನೆಂದು ಮೂರನೇ ಮಗುವಿಗೆ ಕೆಲ ತಿಂಗಳಾದ ಬಳಿಕ ಮೂವರೂ ಮಕ್ಕಳನ್ನು ಹೆತ್ತವರ ಬಳಿ ಬಿಟ್ಟು 1975 ರಲ್ಲಿ ಮನೆಯಿಂದ ಪರಾರಿಯಾಗಿದ್ದಳು. ಈ ಕುರಿತು ಇಂಡಿಯಾನಾ ಪೊಲೀಸರಲ್ಲಿ ದೂರೂ ಸಹ ದಾಖಲಾಗಿತ್ತು.

ಈ ಮಧ್ಯೆ ಶವವೊಂದು ಸಿಕ್ಕಿದ್ದು, ಗುರುತು ಹಿಡಿಯಲಾಗದ ಸ್ಥಿತಿಯಲ್ಲಿದ್ದ ಅದನ್ನು ತಮ್ಮ ಪುತ್ರಿಯದ್ದೇ ಎಂದು ಭಾವಿಸಿ ಲೂಲಾ ಆನ್, ಪೋಷಕರು ಅಂತ್ಯಸಂಸ್ಕಾರ ನೆರವೇರಿಸಿದ್ದು. ಇತ್ತೀಚೆಗೆ ಲೂಲಾ ಆನ್ ಹೋಲಿಕೆ ಇರುವ ಮಹಿಳೆಯೊಬ್ಬಳು ಟೆಕ್ಸಾಸ್ ನಲ್ಲಿ ಕಂಡು ಬಂದಾಗ ಅನುಮಾನಗೊಂಡ ಪೊಲೀಸರು ವಿಚಾರಿಸಿದ ವೇಳೆ ನಿಜ ಸಂಗತಿ ಬಯಲಾಗಿದೆ. ಬೇರೊಂದು ಹೆಸರಿನಲ್ಲಿ ಜೀವಿಸುತ್ತಿದ್ದ ಲೂಲಾ, ಈಗಾಗಲೇ ಪ್ರಾಪ್ತ ವಯಸ್ಕರಾಗಿರುವ ತನ್ನ ಮಕ್ಕಳನ್ನು ಭೇಟಿ ಮಾಡಲು ಮುಂದಾಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...