alex Certify
ಕನ್ನಡ ದುನಿಯಾ       Mobile App
       

Kannada Duniya

ದಾವೂದ್ ಹೆಚ್ಚು ಕರೆ ಮಾಡಿದ್ದು ಈ ಬಿಜೆಪಿ ಸಚಿವನಿಗೆ

Dawood-Khadse

ಮುಂಬೈ: ಮುಂಬೈ ಸರಣಿ ಸ್ಪೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ, ಪಾಕಿಸ್ತಾನದಲ್ಲಿ ನೆಲೆಸಿರುವುದು ಜಗಜ್ಜಾಹೀರಾಗಿದೆ. ಪಾಕ್ ಸೇನೆಯ ಕಣ್ಗಾವಲಿನಲ್ಲೇ ದಾವೂದ್ ನೆಲೆಸಿದ್ದಾನೆ ಎಂದು ಹೇಳಲಾಗಿದೆ.

ಪಾಕ್ ನಲ್ಲಿದ್ದರೂ, ಕೆಲವು ಭಾರತೀಯರೊಂದಿಗೆ ನಿಕಟ ಸಂಪರ್ಕ ಹೊಂದಿರುವ ದಾವೂದ್, ಭೂಗತ ಚಟುವಟಿಕೆಗಳನ್ನು ನಡೆಸುತ್ತಾನೆ. ವಡೋದರಾ ಮೂಲದ ಹ್ಯಾಕರ್ ಮನೀಶ್ ಮಾಹಿತಿ ಸಂಗ್ರಹಿಸಿ, ದಾವೂದ್ ಭಾರತದ ಪ್ರಮುಖ ರಾಜಕಾರಣಿಯೊಬ್ಬರಿಗೆ ಕರೆ ಮಾಡುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದರು. ದಾವೂದ್ ಯಾವ ನಂಬರ್ ನಿಂದ ಯಾರಿಗೆ ಕರೆ ಮಾಡಿದ್ದಾರೆ ಎಂದು ಹೇಳಲಾಗಿತ್ತಾದರೂ, ಅತಿ ಹೆಚ್ಚು ಬಾರಿ ದಾವೂದ್ ಕರೆ ಸ್ವೀಕರಿಸಿದ್ದ ವ್ಯಕ್ತಿ ಯಾರೆಂಬುದನ್ನು ಬಹಿರಂಗಪಡಿಸಿರಲಿಲ್ಲ.

ದಾವೂದ್ ಪತ್ನಿ ಮೆಹಜಬೀನ್ ಶೇಖ್ ಹೆಸರಲ್ಲಿ ನೋಂದಣಿಯಾಗಿರುವ ಫೋನ್ ಗಳನ್ನು ಹ್ಯಾಕ್ ಮಾಡಿದ್ದ ಮನೀಶ್, ಮಾಹಿತಿ ಕಲೆ ಹಾಕಿದ್ದರು. ಅದರ ಪ್ರಕಾರ, ದಾವೂದ್ ಅತಿಹೆಚ್ಚು ಬಾರಿ ಮಹಾರಾಷ್ಟ್ರದ ಬಿಜೆಪಿ ಮುಖಂಡ ಮತ್ತು ಕಂದಾಯ ಸಚಿವ ಏಕನಾಥ್ ಕಾಡ್ಸೆ ಅವರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಈ ಆರೋಪವನ್ನು ಕಾಡ್ಸೆ ನಿರಾಕರಿಸಿದ್ದಾರೆ. ಇದು ಬೆಳಕಿಗೆ ಬರುತ್ತಿದ್ದಂತೆ ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...