alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಮಾಗೆ ಹೋಗಿದ್ದ ತಾಯಿಗೆ ಮಗನ ಧ್ವನಿ ಕೇಳಿದಾಗ ಬಂತು ಜೀವ

2016_6image_20_34_304560560mother-ll

ತಾಯಿ ಹಾಗೂ ಆಕೆಯ ಮಮತೆಯ ಮುಂದೆ ಬೇರೇನೂ ಇಲ್ಲ. ಈ ಮಾತು ನೂರಕ್ಕೆ ನೂರು ಸತ್ಯ. ಲಂಡನ್ ನಲ್ಲಿ ನಡೆದ ಒಂದು ಘಟನೆ ಇದಕ್ಕೆ ಉತ್ತಮ ನಿದರ್ಶನ.

ಬಾರ್ಟ್ಲೆ ಡೇನಿಯಲ್ ಎಂಬಾಕೆ ಮಗನನ್ನು ಸ್ಕೂಲಿಗೆ ಬಿಟ್ಟು ಮರಳಿ ಬರ್ತಾ ಇದ್ದಳು. ಈ ವೇಳೆ ಮಳೆ ಶುರುವಾಗಿದೆ. ದಾರಿ ಮಧ್ಯೆ ಕಾರು ನಿಲ್ಲಿಸಿ ಇಳಿಯಲು ಮುಂದಾಗಿದ್ದಾಳೆ ಡೇನಿಯಲ್. ಆದ್ರೆ ಅಲ್ಲಿ ನಡೆದ ಅಪಘಾತ ಆಕೆ ಆಸ್ಪತ್ರೆ ಸೇರುವಂತೆ ಮಾಡಿದೆ.

ಚಿಕಿತ್ಸೆ ನೀಡಿದ ವೈದ್ಯರ ತಂಡ ಡೇನಿಯಲ್ ಕೋಮಾಗೆ ಹೋಗಿದ್ದಾಳೆಂದು ತಿಳಿಸಿದ್ದಾರೆ. 30 ಮಂದಿ ಕಾರ್ಯನಿರತ ವೈದ್ಯರ ತಂಡ ನಾನಾ ಬಗೆಯ ಚಿಕಿತ್ಸೆ ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಅಜ್ಜಿ ಮನೆಯಲ್ಲಿರುವ ಮಗ, ತಾಯಿಗೆ ಸಂದೇಶ ರವಾನಿಸಿದ್ದಾನೆ. ವೈದ್ಯರು ಹೇಳಿದಂತೆ ಕೇಳಲು ಮಗ ಸೂಚನೆ ನೀಡಿದ್ದಾನೆ.

ಬೆಡ್ ಮೇಲೆ ಮಲಗಿದ್ದ ತಾಯಿಗೆ ಮಗನ ಸಂದೇಶ ಕೇಳಿಸಿದೆ. ಸತ್ತಂತೆ ಮಲಗಿದ್ದ ತಾಯಿಗೆ ಮಗನ ಧ್ವನಿ ಕೇಳಿಸ್ತಾ ಇದ್ದಂತೆ ಎಚ್ಚರವಾಗಿದೆ. ಸದ್ಯ ತಾಯಿ ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...