alex Certify
ಕನ್ನಡ ದುನಿಯಾ       Mobile App
       

Kannada Duniya

ಐಸಿಸ್ ಉಗ್ರರು ಹೆದರೋದು ಇವರಿಗೆ ಮಾತ್ರ

isis

ತಮ್ಮ ಕರಾಳ ಕೃತ್ಯಗಳ ಮೂಲಕ ವಿಶ್ವದ ನೆಮ್ಮದಿಗೆ ಭಂಗ ತಂದಿರುವ ಐಸಿಸ್ ಉಗ್ರರು ಯಾರಿಗೂ ಹೆದರಲ್ಲ ಎಂಬ ಮಾತಿದೆ. ಎಂತಹ ದೊಡ್ಡ ದೇಶಗಳ ಸೈನಿಕರನ್ನೇ ಎದುರಿಸುವ ಸಾಮರ್ಥ್ಯ ತಾಕತ್ತನ್ನು ಪ್ರದರ್ಶಿಸುವ ಐಸಿಸ್ ಉಗ್ರರು ಇವರಿಗೆ ಮಾತ್ರ ಭಯಪಡುತ್ತಾರೆ.

ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿರುವ ದೊಡ್ಡ ದೇಶಗಳ ಸೈನಿಕರಿಗೆ ಹೆದರದ ಐಸಿಸ್ ಉಗ್ರರು ಹೆದರುವುದು ಒಂದೇ ಒಂದು ದೇಶದ ಸೈನಿಕರಿಗೆ ಮಾತ್ರ. ಈ ದೇಶದ ಸೈನಿಕರ ದಾಳಿ, ಯುದ್ಧ ತಂತ್ರಗಾರಿಕೆಯನ್ನು ಅರಿಯದೇ ಐಸಿಸ್ ಉಗ್ರರು ಭಯಪಡುತ್ತಾರೆ. ಹೌದು, ಐಸಿಸ್ ಉಗ್ರರು ಭಯಪಡುವುದು ಇಸ್ರೇಲ್ ಸೈನಿಕರಿಗೆ ಮಾತ್ರ. ಇಸ್ರೇಲ್ ಸೈನಿಕರ ಕಾರ್ಯತಂತ್ರಕ್ಕೆ ಮಾತ್ರ ನಾವು ಹೆದರುತ್ತೇವೆ ವಿನಹ ಉಳಿದ ದೇಶಗಳ ಸೇನೆ ಬಗ್ಗೆ ನಮಗೆ ಚಿಂತೆಯಿಲ್ಲ ಎಂದು ಐಸಿಸ್ ಉಗ್ರರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಜರ್ಮನಿ ಪತ್ರಕರ್ತ ಜುರ್ಗೆನ್ ತೋಡೆನ್ ಹೊಫೆರ್ ಅವರು ಐಸಿಸ್ ಉಗ್ರರ ನೆಲೆ ಭೇಟಿ ನೀಡಿ ಅವರೊಂದಿಗೆ ಸಂದರ್ಶನ ನಡೆಸಿದ್ದು, ಆಗ ಈ ಸಂಗತಿ ಗೊತ್ತಾಗಿದೆ. ಇಸ್ರೇಲ್ ಸೈನಿಕರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಅಲ್ಲದೇ, ತಾಂತ್ರಿಕವಾಗಿಯೂ ಬಲವಾಗಿದ್ದು, ಗೆರಿಲ್ಲಾ ವಾರ್ ನಲ್ಲಿ ನಿಪುಣರಿದ್ದಾರೆ. ಅವರೊಂದಿಗೆ ಕಾದಾಡುವುದು ಕಷ್ಟ ಎಂದು ಐಸಿಸ್ ಉಗ್ರರು ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...