alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲಾ ಪಠ್ಯದಲ್ಲಿ ಹೀರೋ ಆಗಿದ್ದಾನೆ ಈ ಭಯೋತ್ಪಾದಕ..!

ಭಯೋತ್ಪಾದನೆ ಮತ್ತು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಎನ್ ಐ ಎ ತನಿಖೆ ಎದುರಿಸುತ್ತಿರುವ ಝಾಕಿರ್ ನಾಯ್ಕ್ ನನ್ನು ಶಾಲಾ ಪುಸ್ತಕದಲ್ಲಿ ಹೀರೋ ಎಂಬಂತೆ ಬಿಂಬಿಸಲಾಗಿದೆ. ಅಲಿಗಢದ ದೋಧ್ಪುರದಲ್ಲಿರೋ ದಿ ಇಸ್ಲಾಮಿಕ್ ಮಿಷನ್ ಸ್ಕೂಲ್ ಈ ರೀತಿ ಮಾಡಿದೆ.

1ನೇ ತರಗತಿಯ ಪುಸ್ತಕದಲ್ಲಿ 9 ಖ್ಯಾತ ಮುಸಲ್ಮಾನ್ ಮುಖಂಡರ ಹೆಸರನ್ನು ಮುದ್ರಿಸಲಾಗಿದೆ. ಅವರಲ್ಲಿ ಝಾಕಿರ್ ನಾಯ್ಕ್ ಕೂಡ ಒಬ್ಬ. ಆತನನ್ನು ಇಸ್ಲಾಮಿಕ್ ಹೀರೋ ಅಂತಾ ಉಲ್ಲೇಖಿಸಲಾಗಿದೆ. ಈತ ಮುಂಬೈನಲ್ಲಿ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಎಂಬ ಎನ್ ಜಿ ಓ ಒಂದನ್ನು ಆರಂಭಿಸಿದ್ದ.

ಮಕ್ಕಳ ಸಾಮಾನ್ಯ ಜ್ಞಾನ ವೃದ್ಧಿಗಾಗಿ ಈ ಪುಸ್ತಕವನ್ನು ಮುದ್ರಿಸಲಾಗಿದೆಯಂತೆ. 2 ವರ್ಷಗಳ ಹಿಂದೆ ಮುದ್ರಿಸಿರುವ ಪುಸ್ತಕ ಇದು, ಝಾಕಿರ್ ನಾಯ್ಕ್ ಹೆಸರನ್ನು ತೆಗೆದು ಹಾಕುತ್ತೇವೆ ಅಂತಾ ಶಾಲಾ ಆಡಳಿತ ಮಂಡಳಿ ಹೇಳುತ್ತಿದೆ.

2 ವರ್ಷಗಳ ಹಿಂದೆ ಪುಸ್ತಕ ಮುದ್ರಣ ಮಾಡಿದಾಗ ಝಾಕಿರ್ ನಾಯ್ಕ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಈಗ ಆ ಚಾಪ್ಟರ್ ತೆಗೆದು ಹಾಕಿ ಮರು ಮುದ್ರಣ ಮಾಡುತ್ತೇವೆ ಅಂತಾ ಶಾಲೆಯ ಮ್ಯಾನೇಜರ್ ಕುನೇನ್ ಕೌಸರ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...