alex Certify
ಕನ್ನಡ ದುನಿಯಾ       Mobile App
       

Kannada Duniya

‘ಯುವರಾಜ’ನ ವೀರ್ಯಕ್ಕಿದೆ ಭಾರೀ ಬೆಲೆ !!

buffalo650_021215054602

ನವದೆಹಲಿ: ದಷ್ಟಪುಷ್ಟವಾಗಿರುವ, ದೃಢವಾದ ಶರೀರ ಹೊಂದಿದ ‘ಯುವರಾಜ’ನ ವೀರ್ಯಕ್ಕೆ ಭಾರೀ ಡಿಮ್ಯಾಂಡ್ ಬಂದಿದೆ. ಮೇಳದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಯುವರಾಜನನ್ನು ನೋಡಲು ಜನರೆಲ್ಲಾ ಮುಗಿ ಬೀಳುತ್ತಿದ್ದಾರೆ. ಅರೇ ಯಾರೀ ಯುವರಾಜ ಎಂಬ ಕುತೂಹಲವೇ? ಹಾಗಾದರೆ ಮುಂದೆ ಓದಿ.

ಹರಿಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿರುವ ಸುನಾರಿಯನ್ ಎಂಬ ಹಳ್ಳಿಯಲ್ಲಿ ಕರ್ಮವೀರ್ ಸಿಂಗ್ ಎಂಬ ರೈತನಿದ್ದಾನೆ. ಈ ರೈತನ ಬಳಿ ಮುರ್ರಾ ತಳಿಗೆ ಸೇರಿದ ಬೃಹತ್ ಗಾತ್ರದ ಕೋಣವೊಂದು ಇದೆ. ಇದನ್ನು ದಿನಕ್ಕೆ ಬರೋಬ್ಬರಿ 3 ಸಾವಿರ ರೂ. ಖರ್ಚು ಮಾಡಿ ಸಾಕುತ್ತಿದ್ದಾನೆ ಕರ್ಮವೀರ್ ಸಿಂಗ್. ಸುಮಾರು 450 ಕೆಜಿ ತೂಕ ಹೊಂದಿರುವ ಈ ಕೋಣ 10 ಅಡಿಗಳಷ್ಟು ಉದ್ದವಿದೆ. ನೋಡಲು ಆನೆಯಂತೆಯೇ ಕಾಣುವ ಈ ಕೋಣ ದೆಹಲಿಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಈ ಕೋಣದ ವೀರ್ಯ ಪಡೆದು ತಾವು ಸಾಕಿರುವ ಎಮ್ಮೆಗಳಿಗೆ ಗರ್ಭಧಾರಣೆ ಮಾಡಿಸಲು ರೈತರು ಮುಂದಾಗಿದ್ದಾರೆ. ಹಾಗಾಗಿ 4 ರಿಂದ 6 ಮಿಲಿ, 1 ಡೋಸ್ ವೀರ್ಯಕ್ಕೆ 300ರಿಂದ 400 ರೂ. ನಿಗದಿ ಮಾಡಲಾಗಿದೆ. ಅಲ್ಲದೇ, ಈ ಕೋಣದಿಂದ ಕರ್ಮವೀರ್ ಸಿಂಗ್ ಗೆ ವರ್ಷಕ್ಕೆ ಸುಮಾರು 40 ಲಕ್ಷ ರೂ. ಆದಾಯ ಕೂಡ ಬರುತ್ತದೆ. ದಿನಕ್ಕೆ 3 ಸಾವಿರ ರೂ ಖರ್ಚು ಮಾಡಿ ಈ ಯುವರಾಜನನ್ನು ಆರೈಕೆ ಮಾಡಲಾಗುತ್ತಿದೆ.

ಭಾರತ ಕ್ರಿಕೆಟ್ ತಂಡದಲ್ಲಿ ಯುವರಾಜ್ ಸಿಂಗ್ ಮಿಂಚಿದಂತೆ ಈ ಯುವರಾಜ್ ಕೋಣ ಹಲವಾರು ಮೇಳ, ಸ್ಪರ್ಧೆಗಳಲ್ಲಿ ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಬಹುಮಾನ ಗಳಿಸಿದೆ. ಮುರ್ರಾ ತಳಿಯ ಈ ವಿಶೇಷ ಕೋಣವನ್ನು ಕರ್ಮವೀರ್ ಸಿಂಗ್ ಭಾರೀ ಅಕ್ಕರೆಯಿಂದ ಸಾಕಿದ್ದಾನೆ. ಆತನಿಗೂ ಇದು ಭಾರೀ ಆದಾಯವನ್ನೇ ತಂದು ಕೊಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...