alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ನಿಲ್ದಾಣಕ್ಕೆ ಪಿಸ್ತೂಲ್ ತಂದಿದ್ದ ಶಾಸಕ

ಹೈದ್ರಾಬಾದ್ ನಲ್ಲಿ ಪಿಸ್ತೂಲ್ ಹಾಗೂ ಸಜೀವ ಮದ್ದು ಗುಂಡುಗಳನ್ನು ಕೊಂಡೊಯ್ತಾ ಇದ್ದ ಶಾಸಕರೊಬ್ಬರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಅಡೋಣಿ ಕ್ಷೇತ್ರದ ವೈಎಸ್ಆರ್ ಕಾಂಗ್ರೆಸ್ ಶಾಸಕ ವೈ.ಸಾಯಿಪ್ರಸಾದ್ ರೆಡ್ಡಿ ಅವರ ಲಗೇಜ್ ನಲ್ಲಿ ಪಿಸ್ತೂಲ್ ಹಾಗೂ ಮದ್ದುಗುಂಡುಗಳಿದ್ವು.

ಲಗೇಜ್ ಪರಿಶೀಲನೆ ವೇಳೆ .32 ಪಿಸ್ತೂಲ್ ಪತ್ತೆಯಾಗಿದೆ. ಕೂಡಲೇ ಭದ್ರತಾ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು. ಶಾಸಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯ್ತು. ಗನ್ ಗೆ ಅವರು ಪರವಾನಿಗೆ ಪಡೆದಿದ್ದರಿಂದ ಬಿಟ್ಟು ಕಳಿಸಲಾಯ್ತು.

ಆದ್ರೆ ಪಿಸ್ತೂಲ್ ಅನ್ನು ವಿಮಾನದಲ್ಲಿ ಕೊಂಡೊಯ್ಯಲು ಅವಕಾಶವಿಲ್ಲ. 2 ದಶಕಗಳ ಹಿಂದೆಯೇ ಸಾಯಿ ಪ್ರಸಾದ್ ರೆಡ್ಡಿ ಗನ್ ಲೈಸನ್ಸ್ ಪಡೆದಿದ್ದಾರೆ. ನಿನ್ನೆ ಥಾಯ್ ಏರ್ವೇಸ್ ವಿಮಾನದ ಮೂಲಕ ಅವರು ಹಾಂಗ್ ಕಾಂಗ್ ಗೆ ಹೊರಟಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...