alex Certify
ಕನ್ನಡ ದುನಿಯಾ       Mobile App
       

Kannada Duniya

ಚಪ್ಪಲಿಯಿಂದ ಹೊಡೆದುಕೊಂಡ ಶಾಸಕ

mla-cappali

ಹೈದರಾಬಾದ್: ಶಾಸಕರೊಬ್ಬರು ತಮ್ಮನ್ನು ತಾವು ಚಪ್ಪಲಿಯಿಂದ ಹೊಡೆದುಕೊಂಡ ವಿಲಕ್ಷಣ ಪ್ರಸಂಗ ಆಂಧ್ರಪ್ರದೇಶದ ಕಡಪದಲ್ಲಿ ನಡೆದಿದೆ.

ಕಡಪ ಜಿಲ್ಲೆಯ ಪ್ರೊದಟ್ಟೂರು ಕ್ಷೇತ್ರದ ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿ ಶಾಸಕ ರಾಚಮಲ್ಲು ಶಿವಪ್ರಸಾದ್ ರೆಡ್ಡಿ ಚಪ್ಪಲಿಯಿಂದ ಹೊಡೆದುಕೊಂಡವರು.

ಪ್ರೊದಟ್ಟೂರು ಸ್ಥಳೀಯ ಸಂಸ್ಥೆಗೆ(ಮುನ್ಸಿಪಾಲಿಟಿ) ಎಲೆಕ್ಷನ್ ನಿಗದಿಯಾಗಿದ್ದು, ಅಧಿಕಾರಕ್ಕಾಗಿ ತೆಲುಗು ದೇಶಂ ಪಾರ್ಟಿ ಮತ್ತು ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿ ನಡುವೆ ಪೈಪೋಟಿ ಉಂಟಾಗಿತ್ತು.

ನಿಗದಿಯಾಗಿದ್ದ ಚುನಾವಣೆಯನ್ನು ಮುಂದೂಡಿದ್ದು ಮತ್ತು ಅಧಿಕಾರಕ್ಕಾಗಿ ಸದಸ್ಯರ ನಡುವಿನ ಕಚ್ಚಾಟದಿಂದ ಬೇಸತ್ತ ರಾಚಮಲ್ಲು ಶಿವಪ್ರಸಾದ್ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.

ಆಂಧ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಸೂಚನೆಯಂತೆ ಅಧಿಕಾರಿಗಳು ನಡೆದುಕೊಂಡಿದ್ದಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ ಅವರು, ಪ್ರತಿಭಟನೆಯ ಸಂದರ್ಭದಲ್ಲಿ ಚಪ್ಪಲಿಯಿಂದ ಹೊಡೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...