alex Certify
ಕನ್ನಡ ದುನಿಯಾ       Mobile App
       

Kannada Duniya

ಮುಖ್ಯಮಂತ್ರಿ ಮೇಲೆ ಮಸಿ ಎರಚಿದ ಯುವಕ…!

ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರ ಮೇಲೆ ಶಾಹಿ ಎರಚಿದ ಘಟನೆ ನಡೆದಿದೆ. ಅವರು ಹಿಸ್ಸಾರ್ ಗೆ ಭೇಟಿ ನೀಡಿದ್ದ ವೇಳೆ ಯುವಕನೊಬ್ಬ ಈ ಕೃತ್ಯ ಎಸಗಿದ್ದು, ಆತನನ್ನ ಪೊಲೀಸರು ಬಂಧಿಸಿದ್ದಾರೆ.

ಹರಿಯಾಣದಿಂದ 250 ಕಿಲೋ ಮೀಟರ್ ದೂರವಿರುವ ಹಿಸ್ಸಾರ್ ನಲ್ಲಿ ರೋಡ್ ಶೋದಲ್ಲಿ ಭಾಗವಹಿಸಲು ಮುಖ್ಯಮಂತ್ರಿಗಳು ತೆರಳಿದ್ರು. ತೆರೆದ ಜೀಪ್ ನಲ್ಲಿ ಝೆಡ್ ಪ್ಲಸ್ ಭದ್ರತೆಯೊಂದಿಗೆ ರೋಡ್ ಶೋ ನಡೆಸಿ, ದೇವಾಲಯದಲ್ಲಿ ಹಸುವಿಗೆ ಆಹಾರ ನೀಡುತ್ತಿದ್ದಾಗ, ಯುವಕನೊಬ್ಬ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅವರ ಮೇಲೆ ಮಸಿ ಎರಚಿದ್ದಾನೆ. ತಕ್ಷಣವೇ ಆ ಯುವಕನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಬಂಧಿತ ವ್ಯಕ್ತಿ ಎನ್ ಎಲ್ ಡಿ ಕಾರ್ಯಕರ್ತ ಎಂದು ತಿಳಿದು ಬಂದಿದೆ. ಆದ್ರೆ ಭಾರತೀಯ ರಾಷ್ಟ್ರೀಯ ಲೋಕದಳ ಈತ ತಮ್ಮ ಕಾರ್ಯಕರ್ತ ಅಲ್ಲ ಅಂತಾ ಸ್ಪಷ್ಟಪಡಿಸಿದೆ. ಇನ್ನು ಈ ಘಟನೆ ಮುಖ್ಯಮಂತ್ರಿಯ ವೈಯುಕ್ತಿಕ ಭದ್ರತೆಯನ್ನು ಪ್ರಶ್ನೆ ಮಾಡುವಂತಿದೆ. ಮನೋಹರ್ ಲಾಲ್ ಖಟ್ಟರ್ ಹರಿಯಾಣದಲ್ಲಿ ಮೊದಲ ಬಿಜೆಪಿ ಸಿಎಂ ಆಗಿ 2014 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...