alex Certify
ಕನ್ನಡ ದುನಿಯಾ       Mobile App
       

Kannada Duniya

ಧರ್ಮ ಪತ್ತೆಗೆ ಪ್ಯಾಂಟ್ ಬಿಚ್ಚಿಸಿದ್ರು

ಹರ್ಯಾಣದ ರೆವಾಡಿಯಲ್ಲಿ ಯುವಕನ ಧರ್ಮ ಪತ್ತೆ ಹಚ್ಚಲು ಪ್ಯಾಂಟ್ ಬಿಚ್ಚಿಸಿದ ಘಟನೆ ಬೆಳಕಿಗೆ ಬಂದಿದೆ. ಆರಂಭದಲ್ಲಿ ಈ ಬಗ್ಗೆ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಎಸ್ ಪಿ ಯಾವುದೇ ಕ್ರಮ ಕೈಗೊಳ್ಳದ ಪೊಲೀಸ್ ಸಿಬ್ಬಂದಿಯನ್ನು ಅಮಾನತ್ತು ಮಾಡಿ ದೂರು ದಾಖಲಿಸಿಕೊಂಡಿದ್ದಾರೆ.

ಹರ್ಯಾಣದ ಮಹೇಂದ್ರಗಡ್ ಮಹಿಳೆಯೊಬ್ಬಳು ಪ್ರೀತಿಸಿ ಮದುವೆಯಾಗಿದ್ದಳು. ಪತಿ ಜೊತೆ ಅಕ್ಟೋಬರ್ 10ರಂದು ಮನೆಗೆ ಬರ್ತಿದ್ದ ವೇಳೆ 15 ಮಂದಿ ಇವರನ್ನು ಸುತ್ತುವರೆದಿದ್ದಾರೆ. ಜಾತಿ ಪ್ರಮಾಣ ಪತ್ರ ತೋರಿಸುವಂತೆ ಹೇಳಿದ್ದಾರೆ. ಜಾತಿ ಪತ್ರ ತೋರಿಸಿದ ನಂತ್ರವೂ ಅವರು ಮಹಿಳೆ ಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಧರ್ಮ ಪತ್ತೆಗೆ ಪ್ಯಾಂಟ್ ಬಿಚ್ಚುವಂತೆ ಹೇಳಿದ್ದಾರಂತೆ. ಇದನ್ನು ನಿರಾಕರಿಸಿದ್ದಕ್ಕೆ ಮತ್ತೆ ಹಲ್ಲೆ ನಡೆಸಿದ್ದಾರಂತೆ. ಈ ಬಗ್ಗೆ ಬಸ್ ನಿಲ್ದಾಣದ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಳಂತೆ. ಆದ್ರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ನಂತ್ರ ಎಸ್ ಪಿ ಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...