alex Certify
ಕನ್ನಡ ದುನಿಯಾ       Mobile App
       

Kannada Duniya

70 ಲಕ್ಷ ಹೊಸ ನೌಕರಿ: 50 ಲಕ್ಷ ವಿದ್ಯಾರ್ಥಿಗಳಿಗೆ ಸ್ಟೈಪಂಡ್

ಮಕ್ಕಳನ್ನು ಶಾಲೆಗೆ ಕಳುಹಿಸಿದ್ರೆ ಸಾಲದು, ಮಕ್ಕಳಿಗೆ ಉತ್ತಮ ಹಾಗೂ ಉದ್ಯೋಗಕ್ಕೆ ನೆರವಾಗುವಂತಹ ಶಿಕ್ಷಣ ನೀಡಬೇಕೆಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಶಿಕ್ಷಣದ ಗುಣಮಟ್ಟ ಈಗ್ಲೂ ಚಿಂತೆಗೀಡು ಮಾಡಿರುವ ವಿಷ್ಯವೆಂದು ಜೇಟ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಬುಡಕಟ್ಟು ಕುಟುಂಬದ ಮಕ್ಕಳಿಗಾಗಿ 2020ರ ವೇಳೆಗೆ ಏಕಲವ್ಯ ಶಾಲೆಗಳನ್ನು ತೆರೆಯುವುದಾಗಿ ಹೇಳಿದ್ದಾರೆ. ಶೇಕಡಾ 50ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇಕಡಾ 20ರಷ್ಟು ಬುಡಕಟ್ಟು ಜನಸಂಖ್ಯೆಯಿರುವ ಜಾಗದಲ್ಲಿ ಏಕಲವ್ಯ ಶಾಲೆ ತೆರೆಯುವುದಾಗಿ ಜೇಟ್ಲಿ ಭರವಸೆ ನೀಡಿದ್ದಾರೆ. ವಡೋದರಾದಲ್ಲಿ ರೈಲ್ವೆ ವಿಶ್ವವಿದ್ಯಾನಿಲಯ ತೆರೆಯುವುದಾಗಿ ಜೇಟ್ಲಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.

ಯುವಜನತೆಗೆ ಹೆಚ್ಚೆಚ್ಚು ಉದ್ಯೋಗ ನೀಡುವುದು ನಮ್ಮ ಗುರಿ ಎಂದ ಜೇಟ್ಲಿ, ಈ ವರ್ಷ 18 ಹೊಸ ಐಐಟಿ ಹಾಗೂ ಎನ್ ಐ ಟಿ ಗಳನ್ನು ತೆರೆಯುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ 5 ಮಿಲಿಯನ್ ಯುವಜನರಿಗೆ ಸ್ಟೈಪಂಡ್ ನೀಡುವುದಾಗಿ ಜೇಟ್ಲಿ ಘೋಷಣೆ ಮಾಡಿದ್ದಾರೆ. 70 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...