alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ರೈಲ್ವೆ ನಿಲ್ದಾಣದಲ್ಲಿ ಲೈವ್ ಆಗಿ ನಡೀತು ಮೊಬೈಲ್ ಕಳ್ಳತನ

ಮುಂಬೈ ಸ್ಥಳೀಯ ರೈಲುಗಳಲ್ಲಿ ಪುಂಡಾಟಿಕೆ ಮೆರೆಯುವ ಯುವಕರ ಗುಂಪೊಂದು ಮೊಬೈಲ್ ಕದಿಯುವ ಮತ್ತು ಚಲಿಸುತ್ತಿರುವ ರೈಲಿನಲ್ಲಿ ಅಪಾಯಕಾರಿ ಸಾಹಸವನ್ನು ಮಾಡುವ ಪ್ರಕರಣಗಳು ದಿನೇ ದಿನೇ ಪೊಲೀಸರಿಗೆ ಹೊಸ ತಲೆನೋವು ತಂದಿಟ್ಟಿದೆ.

ಇತ್ತೀಚೆಗಷ್ಟೆ ಮುಂಬೈನ ಚುನಾಬಟ್ಟಿ ಮತ್ತು ಜಿಟಿಬಿ ನಗರ್ ರೈಲ್ವೇ ನಿಲ್ದಾಣಗಳ ನಡುವೆ ಚಲಿಸುತ್ತಿರುವ ರೈಲಿನಲ್ಲಿ ಮೊಬೈಲ್ ಕದ್ದಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ರೈಲಿನ ಬಾಗಿಲಿನಲ್ಲಿ ನಿಂತಿರುವ ನಾಲ್ಕು ಮಂದಿ ಯುವಕರ ಗುಂಪಿನಲ್ಲಿ ಒಬ್ಬ ಪ್ಲಾಟ್ ಫಾರ್ಮ್ನಲ್ಲಿ ರೈಲಿಗಾಗಿ ಕಾಯುತ್ತಾ ನಿಂತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಕದ್ದಿದ್ದಾನೆ. ಇಡೀ ಘಟನೆಯನ್ನ ಮತ್ತೊಬ್ಬ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರೋ ಈ ವಿಡಿಯೋ ಸಾಕ್ಷ್ಯಾಧಾರದ ಮೇಲೆ ಮುಂಬೈ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಾಚರಣೆ ದಳದ ಸಿಬ್ಬಂದಿ ತನಿಖೆ ನಡೆಸಿ ಘಟನೆಯಲ್ಲಿ ಭಾಗಿಯಾಗಿದ್ದ ಯುವಕರನ್ನು ಬಂಧಿಸಿದ್ದಾರೆ. ಮುಂಬೈ ರೈಲಿನಲ್ಲಿ ಅಪಾಯಕಾರಿ ಸಾಹಸವನ್ನು ಪ್ರದರ್ಶಿಸುವ ಯುವಕರ ಸಂಖ್ಯೆ ಹೆಚ್ಚಿದ್ದು ಪೊಲೀಸರು ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳೋಕೆ ಮುಂದಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...