alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿ ಹತ್ಯೆ ಮಾಡಿ ವಾಟ್ಸಾಪ್ ನಲ್ಲಿ ಪೋಸ್ಟ್ ಹಾಕಿದ ಮಗ

ರಾಜಸ್ಥಾನದ ಬನ್ಸ್ವಾರಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. 18 ವರ್ಷದ ಹುಡುಗನೊಬ್ಬ ತಾಯಿಯನ್ನು ಹತ್ಯೆ ಮಾಡಿದ್ದಾನೆ. ಇಷ್ಟೇ ಅಲ್ಲ ಈ ವಿಷ್ಯವನ್ನು ವಾಟ್ಸಾಪ್ ಗ್ರೂಪ್ ನಲ್ಲಿ ತಿಳಿಸಿದ್ದಾನೆ. ಜೊತೆಗೆ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಇಷ್ಟೇ ಅಲ್ಲ ತಾನು ಆತ್ಮಹತ್ಯೆ ಮಾಡಿಕೊಳ್ತೇನೆಂದು ಪೋಸ್ಟ್ ಹಾಕಿದ ಆರೋಪಿ ಶವ ಎಲ್ಲಿ ಸಿಗಲಿದೆ ಎಂಬುದನ್ನು ಹೇಳಿದ್ದಾನೆ. ಆದ್ರೆ ಈವರೆಗೂ ಪೊಲೀಸರಿಗೆ ಆರೋಪಿ ಶವ ಸಿಕ್ಕಿಲ್ಲವಂತೆ.

ಆರೋಪಿ ವಿನು ಪಂಚಲ್ ಎಂದು ಗೊತ್ತಾಗಿದೆ. ಭಾನುವಾರ ರಾತ್ರಿ 12.30ರ ಸುಮಾರಿಗೆ ತಾಯಿ ಹತ್ಯೆ ಮಾಡಿರುವುದಾಗಿ ವಿನು ವಾಟ್ಸಾಪ್ ನಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ನಂತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಇನ್ನೊಂದು ಪೋಸ್ಟ್ ಹಾಕಿದ್ದಾನೆ.

ಸೋಮವಾರ ಬೆಳಿಗ್ಗೆ ವಾಟ್ಸಾಪ್ ಗ್ರೂಪ್ ಸದಸ್ಯರು ಮೆಸ್ಸೇಜ್ ನೋಡಿದ್ದಾರೆ. ಸಾರಿ, ನನ್ನನ್ನು ಕ್ಷಮಿಸಿ ಬಿಡಿ. ಅಮ್ಮನ ಜೊತೆ ಜಗಳವಾಯ್ತು. ಅಮ್ಮನನ್ನು ಕೊಲೆ ಮಾಡಿದೆ. ನಾನೂ ಹೋಗ್ತಿದ್ದೇನೆಂದು ಮೆಸ್ಸೇಜ್ ಹಾಕಿದ್ದ.

ಮೆಸ್ಸೇಜ್ ನೋಡಿ ದಂಗಾದ ಗ್ರೂಪ್ ಸದಸ್ಯರು ನಂತ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆ ಮೃತ ದೇಹವನ್ನು ವಶಕ್ಕೆ ಪಡೆದಿದ್ದಾರೆ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಇಬ್ಬರು ಮಕ್ಕಳಲ್ಲಿ ಕಿರಿಯನಾಗಿದ್ದ ಆರೋಪಿ ಗಣಪತಿ ವಿಸರ್ಜನೆ ವೇಳೆ ಕಾಣಿಸಿಕೊಂಡಿದ್ದನಂತೆ. ತಾಯಿ ಮೇಲೆ ಸಿಟ್ಟು ಬಂದು ಚೂಪಾದ ಶಸ್ತ್ರಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...