alex Certify
ಕನ್ನಡ ದುನಿಯಾ       Mobile App
       

Kannada Duniya

‘ವ್ಯಾಲೆಂಟೈನ್ಸ್ ಡೇ’ ಆಚರಿಸುವ ಪ್ರೇಮಿಗಳಿಗೆ ಇಲ್ಲಿದೆ ‘ಖುಷಿ’ ವಿಚಾರ

ಚಂಡೀಗಢ: ವ್ಯಾಲೆಂಟೈನ್ಸ್ ಡೇ ದಿನವನ್ನು ವಿಶೇಷವಾಗಿ ಕಳೆಯಬೇಕೆಂದು ಪ್ಲಾನ್ ಮಾಡಿಕೊಂಡರೂ, ಕೆಲವು ಸಂಘಟನೆಗಳ ಕಾರ್ಯಕರ್ತರು ಅಡ್ಡಿಪಡಿಸುತ್ತಾರೆ ಎನ್ನುವ ಭಯದಲ್ಲಿದ್ದ ಪ್ರೇಮಿಗಳಿಗೆ ಖುಷಿ ವಿಚಾರ ಇಲ್ಲಿದೆ.

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಈ ಬಾರಿ ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ. ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಯುವ ಪ್ರೇಮಿಗಳಿಗೆ ನಾವು ಖಳನಾಯಕರಾಗಲು ಬಯಸುವುದಿಲ್ಲ. ಯುವಕರು –ಯುವತಿಯರಿಗೆ ಪ್ರೀತಿಸುವ ಹಕ್ಕು ಇದೆ. ಪ್ರತಿಭಟನೆ ನಡೆಸಿ ಅವರಿಗೆ ನಾವು ವಿಲನ್ ಆಗುವುದಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಪ್ರೀತಿ ಇಲ್ಲದಿದ್ದರೆ ಮದುವೆ ಆಗಲ್ಲ. ಮದುವೆ ಆಗದೆ ಇದ್ದರೆ ಜಗತ್ತು ಬೆಳೆಯುವುದಾದರೂ ಹೇಗೆ?  ಪ್ರೀತಿಸುವ ಮತ್ತು ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಲುವ ಹಕ್ಕು ಯುವಕರಿಗೆ, ಪ್ರೇಮಿಗಳಿಗೆ ಇದೆ. ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸದಂತೆ ಸಂಘಟನೆಯವರಿಗೆ ಸೂಚಿಸಿದ್ದಾಗಿ ಅವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...