alex Certify
ಕನ್ನಡ ದುನಿಯಾ       Mobile App
       

Kannada Duniya

ಯುನಾನಿ ವೈದ್ಯನ ಎಡವಟ್ಟಿಗೆ ಯುವಕ ಬಲಿ

ನವದೆಹಲಿ: ವೈದ್ಯೋ ನಾರಾಯಣೋ ಹರಿಃ ಎಂದು ಕರೆಯುತ್ತೇವೆ. ಆದರೆ, ನಂಬಿ ಹೋದ ವೈದ್ಯನೇ ಹರಿ ಪಾದಕ್ಕೆ ದಾರಿ ತೋರಿದರೆ? ಇಲ್ಲಾಗಿದ್ದೂ ಅದೇ.
ಮುಂಬೈನ ಘಾಟ್ಕೋಪೋರ್ ಪ್ರದೇಶದಲ್ಲಿರುವ ಯುನಾನಿ ವೈದ್ಯನ ಬಳಿ ತೆರಳಿದ್ದ ಕಾರ್ತಿಕ್ ದೇಡಾನಿಗೆ ಇಂಜೆಕ್ಷನ್ ಕೊಟ್ಟಿದ್ದು, ತಕ್ಷಣ ಮನೆಗೆ ಕಳುಹಿಸಿದ್ದಾನೆ.

ಈ ವೇಳೆ ತೀವ್ರ ನೋವು ಕಾಣಿಸಿಕೊಂಡಿದ್ದು, ನಡೆಯಲೂ ಸಾಧ್ಯವಾಗಿಲ್ಲ. ಮನೆಯಲ್ಲಿ ವಿಶ್ರಾಂತಿ ಪಡೆದರೂ ನೋವು ಹಾಗೂ ಕಾಯಿಲೆ ಗುಣಮುಖವಾಗದ್ದರಿಂದ ಕಾರ್ತಿಕ್ ಪುನಃ ಅದೇ ವೈದ್ಯನ ಬಳಿ ಹೋಗಿದ್ದು, ಪರೀಕ್ಷಿಸಿದ ವೈದ್ಯ ನೋವು ಕಡಿಮೆಯಾಗಲು ಮತ್ತೆ ಇನ್ನೊಂದು ಇಂಜೆಕ್ಷನ್ ಕೊಟ್ಟು ಕಳುಹಿಸಿದ್ದಾನೆ.

ಮನೆಗೆ ಬಂದ ಕಾರ್ತಿಕ್ ಗೆ ನೋವು ತೀವ್ರಗೊಂಡಿದ್ದು, ಸಯಾನ್ ಆಸ್ಪತ್ರೆಗೆ ಬಂದು ದಾಖಲಾಗಿದ್ದಾನೆ. ಆದರೆ, ಅಲ್ಲಿನ ವೈದ್ಯರು ಎಷ್ಟೇ ಪ್ರಯತ್ನಪಟ್ಟರೂ ಕಾರ್ತಿಕ್ ನನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಮೃತನ ಸಹೋದರ ಜಯಂತ್ ದೇಡಾ ಆರೋಪಿಸಿದ್ದಾರೆ.

ಕಾರ್ತಿಕ್ ರಕ್ತ ವಿಷಯುಕ್ತ ಹಾಗೂ ನಂಜಿನಿಂದ ಕೂಡಿತ್ತು. ಅಲ್ಲದೆ, ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ಬಾವು ಕಂಡುಬಂದಿತ್ತು. ಪೃಷ್ಠ ಭಾಗದಲ್ಲಿ ಗ್ಯಾಂಗ್ರಿನ್ ಪ್ರಾರಂಭದ ಹಂತದಲ್ಲಿತ್ತು ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಸಯಾನ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಯುನಾನಿ ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನ ವೈದ್ಯಕೀಯ ಪ್ರಮಾಣ ಪತ್ರವನ್ನು ತನಿಖೆಗೊಳಪಡಿಸಲು ಕೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...