alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ಯತ್ವ ಪರೀಕ್ಷೆ ವಿರೋಧಿಸಿದವರಿಗೆ ಬಿತ್ತು ಒದೆ

ಮದುವೆ ಮೊದಲ ರಾತ್ರಿ ನಡೆಯುವ ಕನ್ಯತ್ವ ಪರೀಕ್ಷೆ ವಿರೋಧಿಸಿದ್ದ ಮೂವರು ಯುವಕರಿಗೆ ಅದೇ ಸಮುದಾಯದ ಜನರು ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 40 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಘಟನೆ ಪುಣೆಯ ಪಿಂಪ್ರಿಯಲ್ಲಿ ನಡೆದಿದೆ. ಪ್ರಶಾಂತ್ ಅಂಕುಶ್ ಎಂಬಾತ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಶಾಂತ್ ಜೊತೆ ಆತನ ಇಬ್ಬರು ಸ್ನೇಹಿತನ ಮೇಲೆ ಅದೇ ಸಮುದಾಯದ ಜನರು ಹಲ್ಲೆ ನಡೆಸಿದ್ದಾರೆ. ಪ್ರಶಾಂತ್ ಕುಟುಂಬದ ಜೊತೆ ಮದುವೆಯೊಂದಕ್ಕೆ ಹೋಗಿದ್ದರು ಎನ್ನಲಾಗಿದೆ. ಮದುವೆ ಮುಗಿದ ಮೇಲೆ ರಾತ್ರಿ 9 ಗಂಟೆಗೆ ಪಂಚಾಯತಿ ಸೇರಿದೆ. ಅಲ್ಲಿ ಹೆಣ್ಣಿನ ಕಡೆಯವರು ವರನ ಕಡೆಯವರಿಗೆ ಹಣ ನೀಡಿದ್ದಾರೆ. ನಂತ್ರ ಕನ್ಯತ್ವ ಪರೀಕ್ಷೆ ಬಗ್ಗೆ ಮಾತುಕತೆ ನಡೆದಿದೆ.

ಈ ಮಧ್ಯೆ ಅಲ್ಲಿ ಪ್ರಶಾಂತ್ ನೋಡಿದ ಕೆಲವರು ಬೈಗುಳ ಶುರುಮಾಡಿದ್ದಾರೆ. ವಾಸ್ತವವಾಗಿ ಪ್ರಶಾಂತ್ ಕನ್ಯತ್ವ ಪರೀಕ್ಷೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ವಾಟ್ಸ್ ಅಪ್ ಗ್ರೂಪ್ ತಯಾರಿಸಿದ್ದಾರೆ.ಇದನ್ನು ತಿಳಿದಿದ್ದ ಕೆಲವರು ಪ್ರಶಾಂತ್ ಸೇರಿದಂತೆ ಆತನ ಸ್ನೇಹಿತರಿಗೆ ಬೆಲ್ಟ್ ನಲ್ಲಿ ಹಲ್ಲೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...