alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದಕ್ಕೆ ಕಾರಣವಾಗಿದೆ ಕ್ಯಾನ್ಸರ್ ಕುರಿತ ಅಸ್ಸಾಂ ಸಚಿವರ ಹೇಳಿಕೆ

ಅಸ್ಸಾಂ ನ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ, ಕ್ಯಾನ್ಸರ್ ಬರಲು ಕಾರಣವೇನೆಂಬುದನ್ನು ಹೇಳಿದ್ದಾರೆ. ಅವರ ಪ್ರಕಾರ ಯಾವ ಮನುಷ್ಯ ಪಾಪಗಳನ್ನು ಮಾಡುತ್ತಾನೋ ಅಂತವರು ಈ ಕಾಯಿಲೆಗೆ ತುತ್ತಾಗುತ್ತಾರಂತೆ. ಅಷ್ಟೇ ಅಲ್ಲ, ಕುಟುಂಬದ ಯಾರಾದರೂ ಪಾಪ ಕೃತ್ಯವೆಸಗಿದರೆ ದೇವರ ನ್ಯಾಯಾಲಯದಲ್ಲಿ ತಪ್ಪಿಸಿಕೊಳ್ಳಲಾಗುವುದಿಲ್ಲವೆಂದಿದ್ದಾರೆ ಹಿಮಂತ ಬಿಸ್ವಾ ಶರ್ಮಾ.

ಮಂಗಳವಾರದಂದು ಹೊಸದಾಗಿ ನೇಮಕಗೊಂಡ ಶಿಕ್ಷಕರನ್ನುದ್ದೇಶಿಸಿ ಮಾತನಾಡುವ ವೇಳೆ ಸಚಿವರು ಈ ಹೇಳಿಕೆ ನೀಡಿದ್ದು, ಇದಕ್ಕೆ ವಿರೋಧ ಪಕ್ಷದವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆರೋಗ್ಯ ಸಚಿವರಾಗಿ ತಮ್ಮ ಕರ್ತವ್ಯ ನಿಭಾಯಿಸಲು ವಿಫಲರಾಗಿರುವ ಹಿಮಂತ ಬಿಸ್ವಾ ಶರ್ಮಾ, ಪಾಪ-ಪುಣ್ಯಗಳ ಮಾತನಾಡುತ್ತಿದ್ದಾರೆಂದು ಟೀಕಿಸಿದ್ದಾರೆ. ಸಚಿವರ ಈ ಹೇಳಿಕೆ ಕ್ಯಾನ್ಸರ್ ನಿಂದ ಬಳಲುತ್ತಿರುವವರು ಮಾನಸಿಕ ನೋವನ್ನನುಭವಿಸುವಂತಾಗಿದೆ ಎಂದಿದ್ದಾರೆ.

ತಮ್ಮ ಹೇಳಿಕೆ ವಿವಾದದ ರೂಪ ಪಡೆಯುತ್ತಿದ್ದಂತೆಯೇ ಬುಧವಾರದಂದು ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಸಂದೇಶವೊಂದನ್ನು ಹಾಕಿರುವ ಹಿಮಂತ ಬಿಸ್ವಾ ಶರ್ಮಾ, ಒಬ್ಬ ಹಿಂದೂವಾಗಿ ಕರ್ಮದ ಮೇಲೆ ನಂಬಿಕೆಯಿಟ್ಟಿದ್ದೇನೆ. ಇದನ್ನು ವಿಜ್ಞಾನದೊಂದಿಗೆ ಥಳಕು ಹಾಕುತ್ತಿರುವವರ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ತಮ್ಮ ತಂದೆಯೂ ಪಾಪ ಮಾಡಿದ ಕಾರಣಕ್ಕೆ ಕ್ಯಾನ್ಸರ್ ಗೆ ಬಲಿಯಾದರೆಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...