alex Certify
ಕನ್ನಡ ದುನಿಯಾ       Mobile App
       

Kannada Duniya

‘ನಾನೊಬ್ಬ ಫಕೀರ, ನನ್ನನ್ನೇನು ಮಾಡಲು ಸಾಧ್ಯವಿಲ್ಲ’

modi-ral

ಮೊರಾದಾಬಾದ್: ‘ನಾನೊಬ್ಬ ಫಕೀರ, ದೇಶದ ಒಳಿತಿಗಾಗಿಯೇ ನಾನು ಇರುವುದು. ನಾಗರಿಕರೇ ನನ್ನ ಹೈಕಮಾಂಡ್. ಯಾರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟ ಮುಂದುವರೆಯುತ್ತದೆ’ ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ನಡೆದ ಪರಿವರ್ತನ್ ರ್ಯಾಲಿಯಲ್ಲಿ ಮಾತನಾಡಿದ ಅವರು, ನೋಟ್ ಬ್ಯಾನ್ ಆದ ಬಳಿಕ ಜನಸಾಮಾನ್ಯರು ದಿನಗಟ್ಟಲೇ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಯಾರೂ ಸಿಟ್ಟು ಮಾಡಿಕೊಂಡಿಲ್ಲ. ಅವರ ಶ್ರಮವನ್ನು ವ್ಯರ್ಥವಾಗಲು ನಾನು ಬಿಡುವುದಿಲ್ಲ. ಆದರೆ, ಭ್ರಷ್ಟಾಚಾರಿಗಳಿಗೆ ತೊಂದರೆ ತಪ್ಪಿದ್ದಲ್ಲ ಎಂದು ಗುಡುಗಿದ್ದಾರೆ. ನಗದು ವ್ಯವಹಾರ ಆದಷ್ಟು ಕಡಿಮೆ ಮಾಡಿ, ನಿಮ್ಮ ಮೊಬೈಲ್ ಅನ್ನು ಪರ್ಸ್ ರೀತಿ ಬಳಸಲು ಮುಂದಾಗಿ. ಬಡತನ ಹೋಗಲಾಡಿಸುವ ಕಾರ್ಯಕ್ಕೆ ಜೊತೆಯಾಗಿ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...