alex Certify
ಕನ್ನಡ ದುನಿಯಾ       Mobile App
       

Kannada Duniya

ಪಶ್ಚಿಮ ಬಂಗಾಳದಲ್ಲಿ ಗೋವಿನ ಜೊತೆ ಸೆಲ್ಫಿ ಸ್ಪರ್ಧೆ…!

ಯುವ ವೃತ್ತಿಪರರ ತಂಡವೊಂದು ಪಶ್ಚಿಮ ಬಂಗಾಳದಾದ್ಯಂತ ಸಂಚರಿಸಿ ಪಶುಪಾಲನೆಯಿಂದಾಗುವ ಆರ್ಥಿಕ ಅನುಕೂಲಗಳು ಹಾಗೂ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವುದರಿಂದಾಗುವ ಆರ್ಥಿಕ ನಷ್ಟದ ಕುರಿತು ಅರಿವು ಮೂಡಿಸುವ ಕಾರ್ಯ ನಡೆಸುತ್ತಿದೆ. ಇದರತ್ತ ಜನರನ್ನು ಆಕರ್ಷಿಸುವ ಸಲುವಾಗಿ ‘ಸೆಲ್ಫಿ ವಿತ್ ಗೋಮಾತಾ’ ಎಂಬ ಸ್ಪರ್ಧೆಯನ್ನೂ ನಡೆಸುತ್ತಿದೆ.

ಈ ಗೋಸೇವಾ ಪರಿವಾರ ತಂಡವು ಗೋಮಾತೆಯೊಂದಿಗೆ ಸೆಲ್ಫಿ ಎಂಬ ಸ್ಪರ್ಧೆಯೊಂದಿಗೆ 2015ರಲ್ಲಿ ತನ್ನ ಗೋ ಸಂರಕ್ಷಣಾ ಅಭಿಯಾನ ಆರಂಭಿಸಿತ್ತು. ಬಳಿಕ ವರ್ಷ ವರ್ಷವೂ ಈ ಸ್ಪರ್ಧೆಯನ್ನು ಈ ತಂಡವು ಆಯೋಜಿಸುತ್ತಾ ಬರುತ್ತಿದ್ದು, ಈ ಬಾರಿಯೂ ಗೋಮಾತೆಯೊಂದಿಗೆ ಸೆಲ್ಫಿ ಸ್ಪರ್ಧೆ- 2018 ನಡೆಸುತ್ತಿದೆ. ವೈಜ್ಞಾನಿಕವಾಗಿ ಗೋವುಗಳ ರಕ್ಷಣೆ ಈ ಬಾರಿಯ ಥೀಮ್ ಆಗಿದೆ.

ಗೋ ರಕ್ಷಕರ ಹೆಸರಲ್ಲಿ ಗೋವುಗಳ ರಕ್ಷಣೆಗೆ ಹಿಂಸಾ ಮಾರ್ಗ ಅನುಸರಿಸುವುದು ಸರಿಯಲ್ಲ. ಅದು ಸುಸ್ಥಿರ ಮಾರ್ಗವೂ ಅಲ್ಲ. ನಾವು ಗೋಪಾಲನೆಯ ಆರ್ಥಿಕ ಅನುಕೂಲಗಳನ್ನು ಜಾತಿ, ಧರ್ಮದ ಭೇದವಿಲ್ಲದೆ ಎಲ್ಲಾ ರೈತರಿಗೆ ಹೇಳಲು ಪ್ರಯತ್ನಿಸುತ್ತೇವೆ. ಕಸಾಯಿಖಾನೆಗೆ ಹಸುಗಳು ಮಾರಾಟವಾಗುವುದನ್ನು ಸಂಪೂರ್ಣವಾಗಿ ನಿಲ್ಲುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಈ ತಂಡದ ಕಾರ್ಯಕಾರಿ ಸದಸ್ಯ ಲಲಿತ್ ಅಗರ್ವಾಲ್ ಹೇಳುತ್ತಾರೆ.

ಕಳೆದ ವರ್ಷ ನಾವು ಆಯೋಜಿಸಿದ್ದ ಗೋಮಾತೆಯೊಂದಿಗೆ ಸೆಲ್ಫಿ ಸ್ಪರ್ಧೆಗೆ 10,000 ಎಂಟ್ರಿಗಳು ಬಂದಿದ್ದವು. ಅದಕ್ಕಾಗಿ ಮಾಡಲಾಗಿದ್ದ ಆಪ್ ಕ್ರಾಶ್ ಆಗಿತ್ತು. ಹಾಗಾಗಿ ಈ ಬಾರಿ ವಾಟ್ಸಾಪ್, ಟ್ವಿಟರ್, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಮೂಲಕ ಎಂಟ್ರಿಗಳನ್ನು ಸ್ವೀಕರಿಸಲಿದ್ದೇವೆ ಎನ್ನುತ್ತಾರೆ ಇದರ ಉಸ್ತುವಾರಿ ಹೊತ್ತ ಅಭಿಷೇಕ್ ಸಿಂಗ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...