alex Certify
ಕನ್ನಡ ದುನಿಯಾ       Mobile App
       

Kannada Duniya

ಸರಕು ರೈಲಿನ ಮೇಲೇರಿ ವಿದ್ಯುತ್ ತಂತಿ ಹಿಡಿದ ಯುವಕ

ಮಧ್ಯಪ್ರದೇಶದ ಉಜ್ಜಯನಿ ರೈಲ್ವೆ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ಪೊಲೀಸರು ರಕ್ಷಿಸಿದ್ದಾರೆ. ಪೆಟ್ರೋಲ್ ತುಂಬಿದ್ದ ಸರಕು ರೈಲಿನ ಮೇಲೆ ಹತ್ತಿ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದ. ರೈಲ್ವೆ ಪೊಲೀಸರು ತಕ್ಷಣ ಕ್ರಮಕೈಗೊಂಡಿದ್ದರಿಂದ ಯುವಕನ ಆತ್ಮಹತ್ಯೆ ಪ್ರಯತ್ನ ವಿಫಲವಾಗಿದೆ.

ಸುಮಾರು 30 ವರ್ಷದ ಯುವಕ ಮೋಂಟು ಶೇಖ್ ಪೆಟ್ರೋಲ್ ತುಂಬಿದ್ದ ಸರಕು ರೈಲಿನ ಮೇಲೆ ಹತ್ತಿದ್ದಾನೆ. ನಂತ್ರ ವಿದ್ಯುತ್ ತಂತಿಯನ್ನು ಕೈನಲ್ಲಿ ಹಿಡಿದಿದ್ದಾನೆ. ಯುವಕನಿಗೆ ಶಾಕ್ ಹೊಡೆದಿದೆ. ಬೆಂಕಿ ಹತ್ತಿಕೊಳ್ಳುತ್ತಿರುವಾಗಲೇ ಪೊಲೀಸರು ವಿದ್ಯುತ್ ಇಲಾಖೆಗೆ ಹೇಳಿ ಕರೆಂಟ್ ಕಟ್ ಮಾಡಿಸಿದ್ದಾರೆ. ತಕ್ಷಣ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಯುವಕ ಪಶ್ಚಿಮ ಬಂಗಾಳದವನು ಎನ್ನಲಾಗಿದೆ. ಈ ಹಿಂದೆ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...